ADVERTISEMENT

ವೈಭವದ ಆಂಜನೇಯಸ್ವಾಮಿ ರಥೋತ್ಸವ

ಮಲೇಬೆನ್ನೂರು: ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 8:21 IST
Last Updated 1 ಏಪ್ರಿಲ್ 2013, 8:21 IST
ವೈಭವದ ಆಂಜನೇಯಸ್ವಾಮಿ ರಥೋತ್ಸವ
ವೈಭವದ ಆಂಜನೇಯಸ್ವಾಮಿ ರಥೋತ್ಸವ   

ಮಲೇಬೆನ್ನೂರು: ಸಮೀಪದ ಯಲವಟ್ಟಿ ಗ್ರಾಮದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಆಂಜನೇಯಸ್ವಾಮಿ ರಥೋತ್ಸವ ಭಾನುವಾರ ಅದ್ದೂರಿಯಾಗಿ ಸಾಂಪ್ರದಾಯಿಕ ವಿಧಿ ವಿಧಾನದೊಂದಿಗೆ ಜರುಗಿತು.

ಗಣಪತಿ ಪೂಜೆ, ಬಲಿದಾನದ ನಂತರ ಜನತೆ `ರಾಮ ರಾಮ ಗೋವಿಂದ...' ಎನ್ನುತ್ತಾ ರಥ ಎಳೆದರು. ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿಯನ್ನು ಎಸೆದು ಭಕ್ತಿ ಸಮರ್ಪಿಸಿದರು. ಹೂವು ಹಾಗೂ ಧ್ವಜಗಳಿಂದ ರಥ ಹಾಗೂ ರಥಬೀದಿಯನ್ನು ವಿದ್ಯುತ್‌ದೀಪಗಳಿಂದ ಅಲಂಕರಿಸಿದ್ದರು.

ಮಂಗಳವಾದ್ಯ, ಡೊಳ್ಳು, ಹಲಗೆ ಮೇಳ, ಚಕ್ರವಾದ್ಯ, ಭಜಂತ್ರಿಮೇಳ ಉತ್ಸವಕ್ಕೆ ಕಳೆ ತಂದಿದ್ದವು. ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಟಗರು ಕಾಳಗ
ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಉತ್ಸವಗಳೊಂದಿಗೆ `ಟಗರು ಕಾಳಗ'ದಂತಹ ರೋಚಕ ಕ್ರೀಡೆ ಏರ್ಪಡಿಸುವುದು ಉತ್ತಮ ಸಂಪ್ರದಾಯ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಎಂದು ಹೇಳಿದರು.

ಇಲ್ಲಿನ ಬೀರಲಿಂಗೇಶ್ವರ ಶಾಲಾ ಮೈದಾನದಲ್ಲಿ ಅಮ್ಮನಹಬ್ಬದ ಪ್ರಯುಕ್ತ ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಸಂಘ ಏರ್ಪಡಿಸಿದ್ದ ರಾಜ್ಯಮಟ್ಟದ `ಟಗರಿನ ಕಾಳಗ'್ಕೆಚಾಲನೆ ನೀಡಿ ಅವರು ಮಾತನಾಡಿದರು. ಟಗರಿನ ಕಾಳಗ ಜಾನಪದ ಕ್ರೀಡೆಯಾಗಿದ್ದು, ಅದನ್ನು ಉಳಿಸಿ ಬೆಳೆಸಿ ಎಂದು ಕರೆ ನೀಡಿದರು.

ಕೆ.ಪಿ. ಸಿದ್ದಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಅಕ್ಕಿ ಉದ್ಯಮಿ ಬಿ.ಎಂ. ವಾಗೀಶ್‌ಸ್ವಾಮಿ, ಪಿ.ಎಸ್. ಹನುಮಂತಪ್ಪ, ತಾ.ಪಂ. ಅಧ್ಯಕ್ಷೆ ವಿಜಯಲತಾ, ಸದಸ್ಯ ಐರಣಿ ಅಣ್ಣೇಶ್, ಪಿ. ಬಸಪ್ಪ, ಪಿ. ರೇವಣಪ್ಪ,  ಫೈಜ್, ಕೆ.ಎಚ್. ದಾನಪ್ಪ, ಕೊಮಾರನಹಳ್ಳಿ ರಂಗನಾಥ್, ನಾಗಪ್ಪ, ಬೆಳೆಕೆರೆ ಬಸವರಾಜಪ್ಪ, ನಾಗರಾಜ್ ಚಿಟ್ಟಕ್ಕಿ, ಮಜೀದ್, ಗಫಾರ್‌ಖಾನ್ ಇದ್ದರು. ಹೆಚ್ಚಿನ ಸಂಖ್ಯೆ ಟಗರುಗಳು ಕಾಳಗದಲ್ಲಿ ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.