ADVERTISEMENT

ಶಾಸಕರ ಮನೆಮುಂದೆ ತಮಟೆ ಚಳವಳಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 7:45 IST
Last Updated 23 ಫೆಬ್ರುವರಿ 2012, 7:45 IST

ದಾವಣಗೆರೆ: ದಲಿತರಿಗೆ ಬಜೆಟ್‌ನಲ್ಲಿ ಪ್ರತ್ಯೇಕ ನಿಧಿ ಮೀಸಲಿಡುವುದು, ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ನೇತೃತ್ವದಲ್ಲಿ ಬುಧವಾರ ಶಾಸಕ ಎಂ. ಬಸವರಾಜ ನಾಯ್ಕ ಅವರ ನಿವಾಸದ ಮುಂದೆ ತಮಟೆ ಬಾರಿಸಿ ಪ್ರತಿಭಟನೆ ನಡೆಸಲಾಯಿತು.

ಪರಿಶಿಷ್ಟರ ಸಬಲೀಕರಣಕ್ಕೆ ಏಕಗವಾಕ್ಷಿ ಯೋಜನೆ ಪದ್ಧತಿ ಜಾರಿಗೆ ತರಬೇಕು. ಕಳೆದ ಬಜೆಟ್‌ನಲ್ಲಿ ಸರ್ಕಾರ ದಲಿತರ ಅಭಿವೃದ್ಧಿಗೆ ರೂ. 20 ಕೋಟಿ ಮೀಸಲಿರಿಸಿತ್ತು. ಆದರೆ,  ಕೇವಲ ರೂ. 3 ಕೋಟಿ  ಬಿಡುಗಡೆ ಮಾಡಿದೆ. ಗುಲಗಂಜಿಯ ಕೊಡುಗೆಗೆ ಬೆಟ್ಟದಷ್ಟು ಪ್ರಚಾರ ಪಡೆಯುತ್ತಿದೆ ಎಂದು ತೀವ್ರವಾಗಿ ಟೀಕಿಸಿದರು.

ಶಾಸಕರ ಮನೆಮುಂದೆ ತಮಟೆ ಚಳವಳಿಪ್ರಸಕ್ತ ಬಜೆಟ್‌ನಲ್ಲಿ ದಲಿತರ ಅಭಿವೃದ್ಧಿಗೆ ಹೆಚ್ಚು ನಿಧಿ
ಮೀಸಲಿರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರ ದೌರ್ಜನ್ಯ  ತಡೆ ಕುರಿತು ಪ್ರತಿ 6 ತಿಂಗಳಿಗೊಮ್ಮೆ ಮುಖ್ಯಮಂತ್ರಿ  ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕು. ಪರಿಶಿಷ್ಟರ ಅಭಿವೃದ್ಧಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಯೋಜನೆ ರೂಪಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಿದರು.

ದಸಂಸದ ಜಿಲ್ಲಾ ಸಂಚಾಲಕ  ಎ.ಡಿ. ಯಶವಂತಪ್ಪ, ಎ.ಡಿ. ಶರಣಪ್ಪ, ಎಂ. ಈಶ್ವರಪ್ಪ, ಎ.ಡಿ. ಮಾರ್ತಾಂಡಪ್ಪ, ಎಚ್. ದಿವಾಕರ, ಎಚ್. ಮಂಜಪ್ಪ, ಎ.ಡಿ. ವಿಷ್ಣುಮೂರ್ತಿ,  ಎಚ್.ಬಿ. ಅಣ್ಣಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.