ADVERTISEMENT

ಹಿಮೊಫಿಲಿಯಾ ರೋಗಿ ನೋವಿನಿಂದ ಸ್ವತಂತ್ರವಾಗಲಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 6:20 IST
Last Updated 16 ಆಗಸ್ಟ್ 2012, 6:20 IST

ದಾವಣಗೆರೆ: ಹಿಮೊಫಿಲಿಯಾ ರೋಗಿಗಳು ನೋವಿನಿಂದ ಮುಕ್ತರಾಗಲಿ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಆಶಿಸಿದರು.

ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯಲ್ಲಿ ಬುಧವಾರ ನಡೆದ 66ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆ್ಯಂಟಿ ಹಿಮೊಫಿಲಿಯಾ ಫ್ಯಾಕ್ಟರ್ ಪಡೆಯಲು ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಮಾನದಂಡವಾಗಿದೆ. ಈ ಕಾರ್ಡ್ ಹೊಂದಿರದ ರೋಗಿಗಳು ಫ್ಯಾಕ್ಟರ್‌ನಿಂದ ವಂಚಿತರಾಗಬಾರದು. ಹಾಗಾಗಿ, ಬಿಪಿಎಲ್ ಕಾರ್ಡ್ ಹೊರತುಪಡಿಸಿಯೂ ಫ್ಯಾಕ್ಟರ್ ಪಡೆಯಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ. ರೋಗಿಗಳಿಗೆ ಇಂದು ವಿವಿಧ ಸ್ಪರ್ಧೆ ಆಯೋಜಿಸಿ ಅವರ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಯತ್ನಿಸಿರುವ ಸೊಸೈಟಿ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು.

ADVERTISEMENT

ಕರ್ನಾಟಕ ಹಿಮೊಫಿಲಿಯಾ ಸಂಸ್ಥೆ ಗೌರವಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ, ಡಾ.ಎಂ.ವಿ. ಸತ್ಯನಾರಾಯಣ, ಡಾ.ಪಿ.ಕೆ. ಬಸವರಾಜ್, ವೈ. ಮಲ್ಲೇಶ್ ಹಾಜರಿದ್ದರು.

ಯಲ್ಲಮ್ಮ ಪ್ರಾರ್ಥಿಸಿದರು. ರೀಚಾ ಸ್ವಾಗತಿಸಿದರು. ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ ಪ್ರಾಸ್ತಾವಿಕ ಮಾತನಾಡಿದರು. ಮೀರಾ ಹನಗವಾಡಿ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್.ಎಚ್. ರಾಧಾಕೃಷ್ಣ ಜ್ಯುವೆಲರ್ಸ್‌ನ ಆರ್.ಆರ್. ರಮೇಶ್‌ಬಾಬು ಧ್ವಜಾರೋಹಣ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.