ADVERTISEMENT

ಹೊರಗೆ ಮಳೆಯ ಸಿಂಚನ, ಒಳಗೆ ನೃತ್ಯದ ರಸದೌತನ

‘ಚಿರಂತನ ಉತ್ಸವ 2018’ ರಾಷ್ಟ್ರೀಯ ಗೀತ ನೃತ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 4:09 IST
Last Updated 11 ಜೂನ್ 2018, 4:09 IST

ದಾವಣಗೆರೆ: ಹೊರಗೆ ಮಳೆಯ ಸಿಂಚನ, ಒಳಗೆ ನೃತ್ಯದ ರಸದೌತನ. ಇದು ಇಲ್ಲಿನ ಶಿವಯೋಗ ಮಂದಿರದಲ್ಲಿ ಭಾನುವಾರ ಸಂಜೆ ಕಂಡ ದೃಶ್ಯ. ಚಿರಂತನ ಸಂಸ್ಥೆಯ 17ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ‘ಚಿರಂತನ ಉತ್ಸವ 2018’ ರಾಷ್ಟ್ರೀಯ ಗೀತ ನೃತ್ಯೋತ್ಸವವು ಕಲಾರಸಿಕರ ಮನಸೂರೆಗೊಂಡಿತು.

ಚಿರಂತನ ತಂಡವು ಆರಂಭದಲ್ಲಿ ‘ಶಿವ–ಶಕ್ತಿ’ ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರೆ, ಬೆಂಗಳೂರಿನ ‘ಥಾಟ್‌’ ತಂಡ ಕಥಕ್‌ ಮೂಲಕ ರಂಜಿಸಿತು. ಮುಂಬೈಯ ಷಣ್ಮುಖಪ್ರಿಯ ತಂಡವು ಒಡಿಸ್ಸಿ ನೃತ್ಯದ ಸೊಗಡು ತೋಡಿಸಿದರೆ, ಹೈದರಾಬಾದ್‌ ಲಾಸ್ಯ ಲಹರಿ ತಂಡ ಕೂಚಪುಡಿಯ ನೃತ್ಯದ ಸೊಬಗು ಪ್ರದರ್ಶಿಸಿತು. ಇದಕ್ಕೆ ಚಿರಂತನ ತಂಡದ ವಾದ್ಯ ವೈವಿಧ್ಯ (ಸಿಂಫೋನಿ), ಬೆಂಗಳೂರಿನ ರೇವತಿ ಕಾಮತ್‌ ತಂಡದ ವೀಣಾ ವಾದನ ಸಾತ್‌ ನೀಡಿತು.

ಮೈಸೂರಿನ ಭರತನಾಟ್ಯ ಕಲಾವಿದೆ ಡಾ. ಶೀಲಾ ಶ್ರೀಧರ್‌ ಅವರಿಗೆ ಚಿರಂತನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ಶಾಮನೂರು ಶಿವಶಂಕರಪ್ಪ, ಉದ್ಯಮಿ ಅಥಣಿ ವೀರಣ್ಣ, ನಿವೃತ್ತ ಪ್ರಾಂಶುಪಾಲ ಬಿ.ಟಿ.ಅಚ್ಯುತ್‌, ಜನಪದ ತಜ್ಞ ಎಂ.ಜಿ. ಈಶ್ವರಪ್ಪ ಉಪಸ್ಥಿತರಿದ್ದರು. ಮಾಧವ ಪದಕಿ ಸ್ವಾಗತಿಸಿದರು. ಅಲಕಾನಂದ ಪರಿಚಯಿಸಿದರು. ಗೋಪಾಲಕೃಷ್ಣ ವಂದಿಸಿದರು. ದೀಪಾ ಎನ್‌. ಕಾಯ್ರಕಮ ನಿರೂಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.