ADVERTISEMENT

ಹಳದಮ್ಮ ದೇವಿ ಹುಂಡಿಯಲ್ಲಿ ₹11.80ಲಕ್ಷ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 15 ಮೇ 2019, 14:18 IST
Last Updated 15 ಮೇ 2019, 14:18 IST
ಹೊನ್ನಾಳಿ ತಾಲ್ಲೂಕು ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ದೇವಸ್ಥಾನದ ಹುಂಡಿಯ ಹಣವನ್ನು ಬುಧವಾರ ಎಣಿಕೆ ಮಾಡಲಾಯಿತು
ಹೊನ್ನಾಳಿ ತಾಲ್ಲೂಕು ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ದೇವಸ್ಥಾನದ ಹುಂಡಿಯ ಹಣವನ್ನು ಬುಧವಾರ ಎಣಿಕೆ ಮಾಡಲಾಯಿತು   

ಹೊನ್ನಾಳಿ: ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಪ್ರಸಿದ್ಧ ಹಳದಮ್ಮ ದೇವಿ ದೇವಸ್ಥಾನದ ಹುಂಡಿಯನ್ನು ಬುಧವಾರ ಗ್ರಾಮಸ್ಥರ ಸಮ್ಮುಖದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಎಣಿಕೆ ಮಾಡಿದರು.

ಹುಂಡಿಯಲ್ಲಿ ₹ 11,80 ಲಕ್ಷ ನಗದು ಹಾಗೂ ₹ 30 ಸಾವಿರ ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳು ದೊರೆತಿವೆ ಎಂದು ತಹಶೀಲ್ದಾರ್ ಎಚ್. ಮಲ್ಲಿಕಾರ್ಜುನ ತಿಳಿಸಿದರು.

ಅರ್ಚಕರಾದ ಮಲ್ಲಿಕಾರ್ಜುನ, ರಾಜಸ್ವ ನಿರೀಕ್ಷಕ ಜಯರಾಂ, ಮುಜರಾಯಿ ಇಲಾಖೆ ಸಿಬ್ಬಂದಿ ಮಂಜಪ್ಪ, ಗ್ರಾಮ ಲೆಕ್ಕಾಧಿಕಾರಿ ಮುನೇಶ್, ಭರ್ಮಪ್ಪ, ಚೆಲುವರಾಜ್, ಗ್ರಾಮದ ಮುಖಂಡ ಮೈಲಪ್ಪ, ಕೆನರಾ ಬ್ಯಾಂಕಿನ ಸಿಬ್ಬಂದಿ ರಾಮಣ್ಣ, ಆಚಾರ್, ಗ್ರಾಮ ಸಹಾಯಕರು, ಕಂದಾಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.