ADVERTISEMENT

18 ದಿನಗಳಲ್ಲಿ ₹ 10.55 ಲಕ್ಷ ಕಾಣಿಕೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 7:22 IST
Last Updated 27 ಮಾರ್ಚ್ 2018, 7:22 IST
ಹರಪನಹಳ್ಳಿ ತಾಲ್ಲೂಕಿನ ಸುಕ್ಷೇತ್ರ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಎಣಿಕೆ ಮಾಡಲಾಯಿತು.
ಹರಪನಹಳ್ಳಿ ತಾಲ್ಲೂಕಿನ ಸುಕ್ಷೇತ್ರ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಎಣಿಕೆ ಮಾಡಲಾಯಿತು.   

ಹರಪನಹಳ್ಳಿ: ತಾಲ್ಲೂಕಿನ ಸುಕ್ಷೇತ್ರ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನದ ಕಾಣಿಕೆ ಹುಂಡಿಗೆ ಕೇವಲ 18 ದಿನಗಳಲ್ಲಿ ₹ 10,55,455 ಸಂಗ್ರಹಗೊಂಡಿದೆ.

ಮುಜರಾಯಿ ಇಲಾಖೆಯಿಂದ ಸೋಮವಾರ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ನಡೆಸಲಾಯಿತು. ಇದೇ ತಿಂಗಳ 8ರಂದು ಎಣಿಕೆ ಮಾಡಲಾಗಿತ್ತು. ಆಗ ₹ 16,18,625 ಸಂಗ್ರಹವಾಗಿತ್ತು. ಯುಗಾದಿ ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಸುಕ್ಷೇತ್ರಕ್ಕೆ ಭೇಟಿ ನೀಡಿದ್ದರು.

ಮುಜರಾಯಿ ಇಲಾಖೆ ಸಹಾಯಕ ಗುಮಾಸ್ತೆ ಶಾಂತಮ್ಮ, ಸಿಬ್ಬಂದಿ ರಮೇಶ್, ದೇವಸ್ಥಾನ ಸಮಿತಿ ಅಧ್ಯಕ್ಷ ಕೆಂಚಪ್ಪ, ಪ್ರಧಾನ ಅರ್ಚಕ ಎಸ್.ಕೆಂಚಪ್ಪ, ಪ್ರಗತಿ ಕೃಷ್ಣಾ ಬ್ಯಾಂಕ್ ಅಧಿಕಾರಿ ಗಾಯಕವಾಡ್, ಬೀರಪ್ಪ, ಹನುಮಂತಪ್ಪ, ಅಂಜಿನಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.