ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್‌ನಿಂದ 6 ಮಂದಿ ಮೃತಪಟ್ಟಿದ್ದು, 438 ಮಂದಿಗೆ ಶುಕ್ರವಾರ ಕೊರೊನಾ ವೈರಸ್ ತಗುಲಿದೆ.
ಲೋಕಿಕೆರೆಯ 45 ವರ್ಷದ ಮಹಿಳೆ ಹಾಗೂ ಯಲ್ಲಮ್ಮನಗರದ 55 ವರ್ಷದ ಪುರುಷ ಸಿ.ಜಿ.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ನ 80 ವರ್ಷದ ವೃದ್ಧ, ಹೊನ್ನಾಳಿ ತಾಲ್ಲೂಕಿನ ಮರಿಗೊಂಡನಹಳ್ಳಿಯ 70 ವರ್ಷದ ವೃದ್ಧ ಹಾಗೂ 61 ವರ್ಷದ ಶಕ್ತಿನಗರದ ಪುರುಷ ಎಸ್.ಎಸ್. ಆಸ್ಪತ್ರೆಯಲ್ಲಿ ಮೃತಪಟ್ಟರೆ, ಜಗಳೂರು ತಾಲ್ಲೂಕಿನ ಅಸಗೋಡಿನ 58 ವರ್ಷದ ಮಹಿಳೆ ಬಾಪೂಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ದಾವಣಗೆರೆ ನಗರ ಹಾಗೂ ತಾಲ್ಲೂಕಿನಲ್ಲೇ 294 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಹರಿಹರದ 44, ಜಗಳೂರಿನ 16, ಚನ್ನಗಿರಿಯ 25, ಹೊನ್ನಾಳಿಯ 36 ಹೊರ ಜಿಲ್ಲೆಯ 23 ಮಂದಿಗೆ ಕೋವಿಡ್ ತಗುಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.