ADVERTISEMENT

62 ಮಂದಿಗೆ ಸೋಂಕು: ಇಬ್ಬರ ಸಾವು

ದಾವಣಗೆರೆಯ 24, ಹರಿಹರದ 18, ಚನ್ನಗಿರಿಯ 15, ಜಗಳೂರಿನ 3 , ಹೊನ್ನಾಳಿಯ 2 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 10:15 IST
Last Updated 20 ಜುಲೈ 2020, 10:15 IST
ಮಲೇಬೆನ್ನೂರು ಸಮೀಪದ ಯಲವಟ್ಟಿ ಗ್ರಾಮಕ್ಕೆ ಭಾನುವಾರ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದರು.
ಮಲೇಬೆನ್ನೂರು ಸಮೀಪದ ಯಲವಟ್ಟಿ ಗ್ರಾಮಕ್ಕೆ ಭಾನುವಾರ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದರು.   

ದಾವಣಗೆರೆ: ಕೊರೊನಾ ವೈರಸ್‌ ಸೋಂಕು 62 ಮಂದಿಗೆ ಇರುವುದು ಭಾನುವಾರ ದೃಢಪಟ್ಟಿದೆ. ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೇರಿದೆ.

ತೀವ್ರ ಉಸಿರಾಟದ ಸಮಸ್ಯೆ, ಜ್ವರ, ಕಫ, ಮಧುಮೇಹ ಇದ್ದ ನಿಟುವಳ್ಳಿ ಜಯನಗರದ 55 ವರ್ಷದ ಮಹಿಳೆ ಜುಲೈ 15ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 18ರಂದು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ, ಜ್ವರ, ಕಫದಿಂದ ಬಳಲುತ್ತಿದ್ದ ಜಾಲಿನಗರದ 50 ವರ್ಷದ ಮಹಿಳೆಯನ್ನು ಜುಲೈ 17ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಂದೇ ಮೃತಪಟ್ಟಿದ್ದಾರೆ.

ಬೀಡಿ ಲೇಔಟ್‌ನ 49 ವರ್ಷದ ಮಹಿಳೆ, 48 ವರ್ಷದ ಪುರುಷನಿಗೆ 44 ವರ್ಷದ ಪುರುಷನ ಸಂಪರ್ಕದಿಂದ ಸೋಂಕು ಬಂದಿದೆ.

ADVERTISEMENT

ದಾವಣಗೆರೆ ಗೊಲ್ಲರಹಳ್ಳಿಯ 25ರ ಯುವತಿ 38 ವರ್ಷದ ವ್ಯಕ್ತಿಯ ಸಂಪರ್ಕದಿಂದ, ಬಾಷಾನಗರದ 23 ವರ್ಷದ ಯುವತಿಗೆ 42 ವರ್ಷದ ಪುರುಷನ ಸಂಪರ್ಕದಿಂದ, ಸಿದ್ಧವೀರಪ್ಪ ಬಡಾವಣೆಯ 46 ವರ್ಷದ ಪುರುಷ, 29, 56 ವರ್ಷದ ಮಹಿಳೆಯರಿಗೆ 64 ವರ್ಷದ ವೃದ್ಧನಿಗೆ ಸೋಂಕು ಬಂದಿದೆ.

ದಾವಣಗೆರೆ ಕೇಶವನಗರದ 45 ವರ್ಷದ ಪುರುಷನಿಗೆ 25 ವರ್ಷದ ಯುವತಿಯ ಸಂಪರ್ಕದಿಂದ, ಬಿ.ಕಲಪನಹಳ್ಳಿಯ 64 ವರ್ಷದ ವೃದ್ಧರಿಗೆ 55 ವರ್ಷದ ಮಹಿಳೆಯಿಂದ, ನರಸರಾಜಪೇಟೆಯ 64 ವರ್ಷದ ವೃದ್ಧ 30 ವರ್ಷದ ಮಹಿಳೆಯ ಸಂಪರ್ಕದಿಂದ, ವಿನೋಬನಗರದ 53 ವರ್ಷದ ಪುರುಷನಿಗೆ 10 ವರ್ಷದ ಬಾಲಕಿಯ ಸಂಪರ್ಕದಿಂದ ಸೋಂಕು ತಗುಲಿದೆ.

ಇಜಾರ್‌ದರ್‌ ಗಲ್ಲಿಯ 52, 30 ವರ್ಷ ಪುರುಷರು, ನಿಟುವಳ್ಳಿ ಹೊಸ ಬಡಾವಣೆಯ 30 ವರ್ಷದ ಮಹಿಳೆ, ಡಾಬಾ ಬಳಿಯ 40 ವರ್ಷದ ಮಹಿಳೆ, ಯರಗುಂಟೆಯ 43 ವರ್ಷದ ಪುರುಷ, ನಿಜಲಿಂಗಪ್ಪ ಬಡಾವಣೆಯ 34 ವರ್ಷದ ಪುರುಷನಿಗೆ ಸೋಂಕು ಬಂದಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಭಾರತ್‌ ಕಾಲೊನಿಯ 56 ವರ್ಷದ ಪುರುಷ, ಶ್ರೀನಿವಾಸನಗರದ 59 ವರ್ಷದ ಪುರುಷ, ಎಂಸಿಸಿ ಎ ಬ್ಲಾಕ್‌ನ 30 ವರ್ಷದ ಪುರುಷ, ಜೆ.ಎಚ್‌. ಪಟೇಲ್‌ ಬಡಾವಣೆಯ 58 ವರ್ಷದ ಪುರುಷ, 68 ವರ್ಷದ ವೃದ್ಧೆಗೆ ಶೀತಜ್ವರ ಉಂಟಾಗಿದೆ.

ಬೆಂಗಳೂರಿನಿಂದ ಬಂದಿರುವ ಎಂಸಿಸಿ ‘ಎ’ ಬ್ಲಾಕ್‌ನ 16 ವರ್ಷದ ಬಾಲಕನಿಗೆ ಸೋಂಕು ಇದೆ.

ಚನ್ನಗಿರಿಯ 15 ಮಂದಿಗೆ ಸೋಂಕು: ತಾಲ್ಲೂಕು ಸಂತೇಬೆನ್ನೂರಿನ 61 ವರ್ಷದ ವೃದ್ಧ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ನಲ್ಲೂರಿನ 37 ವರ್ಷದ ಪುರುಷನಿಗೆ ಶೀತಜ್ವರ ಉಂಟಾಗಿದೆ. ತೆಗ್ಗಿನಗೆರೆ 35, 45 ವರ್ಷದ ಮಹಿಳೆಯರು, 20, 28 ವರ್ಷದ ಯುವತಿಯರು, 5 ವರ್ಷದ ಬಾಲಕಿ, 14 ವರ್ಷದ ಬಾಲಕ, 32, 45 ಮತ್ತು 36 ವರ್ಷದ ಪುರುಷರಿಗೆ 22 ವರ್ಷದ ಯುವತಿಯ ಸಂಪರ್ಕದಿಂದ ಕೊರೊನಾ ಬಂದಿದೆ.

ತೆಗ್ಗಿನಗೆರೆಯ 61 ವರ್ಷದ ವೃದ್ಧನಿಗೆ 36 ವರ್ಷದ ವ್ಯಕ್ತಿಯಿಂದ ಹಾಗೂ 40 ವರ್ಷದ ಪುರುಷನಿಗೆ 32 ವರ್ಷದ ವ್ಯಕ್ತಿಯಿಂದ ವೈರಸ್‌ ತಗುಲಿದೆ. 39 ವರ್ಷದ ಮಹಿಳೆಗೆ 30 ವರ್ಷದ ಮಹಿಳೆಯ ಸಂಪರ್ಕದಿಂದ ಸೋಂಕು ಬಂದಿದೆ. 65 ವಷರ್ದ ವೃದ್ಧನಿಗೆ ಶೀತಜ್ವರ ಉಂಟಾಗಿದೆ.

ಮೂವರಿಗೆ ಕೊರೊನಾ: ಬೆಂಗಳೂರಿನಿಂದ ಹಿಂತಿರುಗಿರುವ ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿಯ 17 ವರ್ಷದ ಬಾಲಕ, ಜಗಳೂರು ಸಿದ್ಧಮ್ಮನಹಳ್ಳಿಯ 54 ವರ್ಷದ ಹಾಗೂ ಜಗಳೂರು ವಿದ್ಯಾನಗರದ 30 ವರ್ಷದ ಪುರುಷರಿಗೆ ಸೋಂಕು ಇರುವುದು ಖಚಿತವಾಗಿದೆ.

ಹರಿಹರದ 18 ಮಂದಿಗೆ ಸೋಂಕು: ಕಾಳಿದಾಸನಗರದ 26 ವರ್ಷದ ಯುವಕ, ಕರ್ಲಹಳ್ಳಿಯ 33 ವರ್ಷದ ಪುರುಷನಿಗೆ 22 ವರ್ಷದ ಯುವತಿಯ ಸಂಪರ್ಕದಿಂದ ಕೊರೊನಾ ಬಂದಿದೆ. ಹರ್ಲೀಪುರದ 64 ವರ್ಷದ ವೃದ್ಧೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹರಿಹರ ಕೆಎಸ್‌ಆರ್‌ಟಿಸಿ 32 ವರ್ಷದ ಪುರುಷನಿಗೆ ಸೋಂಕು ಬಂದಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಕೊಂಡಜ್ಜಿಯ 28 ಮತ್ತು 45 ವರ್ಷದ ಮಹಿಳೆಯರು, 70 ವರ್ಷದ ವೃದ್ಧ, 27 ವರ್ಷದ ಯುವಕನಿಗೆ 24 ವರ್ಷದ ಯುವಕನ ಸಂಪರ್ಕದಿಂದ ಕೊರೊನಾ ಬಂದಿದೆ. ಕೆ.ಆರ್‌.ನಗರದ 40 ವರ್ಷದ ಮಹಿಳೆಗೆ 29 ವರ್ಷದ ಯುವಕನಿಂದ ಸೋಂಕು ತಗುಲಿದೆ.

ಮಲೆಬೆನ್ನೂರಿನ 6, 5, 17 ವರ್ಷದ ಬಾಲಕರು, 42 ವರ್ಷದ ಮಹಿಳೆ, 44, 38, 48 ವರ್ಷದ ಪುರುಷರು, 22 ವರ್ಷದ ಯುವತಿ 43 ವರ್ಷದ ಮಹಿಳೆಯ ಸಂಪರ್ಕದಿಂದ ಕೊರೊನಾ ಬಂದಿದೆ. ಮಲೆಬೆನ್ನೂರಿನ 60 ವರ್ಷದ ವೃದ್ಧರಿಗೆ 44 ವರ್ಷದ ವ್ಯಕ್ತಿಯ ಸಂಪರ್ಕದಿಂದ ವೈರಸ್‌ ತಗುಲಿದೆ.

ಹೊನ್ನಾಳಿಯ ಇಬ್ಬರಿಗೆ ಸೋಂಕು: ತಾಲ್ಲೂಕಿನ ಭೈರನಹಳ್ಳಿ 45 ವರ್ಷದ ಮಹಿಳೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಹುಣಸಘಟ್ಟದ 60 ವರ್ಷದ ವೃದ್ಧೆ ಶೀತಜ್ವರ ಉಂಟಾಗಿದೆ.

ಜಿಲ್ಲೆಯಲ್ಲಿ ಈವರೆಗೆ 807 ಮಂದಿಗೆ ಸೋಂಕು ತಗುಲಿದೆ. ಭಾನುವಾರ 11 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರೂ ಸೇರಿ ಒಟ್ಟು 571 ಮಂದಿ ಗುಣಮುಖರಾಗಿದ್ದಾರೆ. 29 ಮಂದಿ ಮೃತಪಟ್ಟಿದ್ದಾರೆ. 207 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 8 ಮಂದಿ ಐಸಿಯುನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.