ಚಳ್ಳಕೆರೆ: ಗ್ರಾಮದ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹80 ಲಕ್ಷ ಅನುದಾನ ನೀಡುವುದಾಗಿ ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.
ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಸೌಹಾರ್ದ ಮಿತ್ರ ಮಂಡಳಿಯಿಂದ ಶನಿವಾರ ರಾತ್ರಿ ಆಯೋಜಿಸಿದ್ದ ನಿವೃತ್ತ ಯೋಧರು ಮತ್ತು ನೌಕರರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರಾಜಕೀಯದಿಂದ ಉಂಟಾದ ವೈಯಕ್ತಿಕ ಸಣ್ಣಪುಟ್ಟ ವೈಷಮ್ಯ ಮರೆಯಬೇಕು. ಎಂಥದ್ದೇ ಪರಿಸ್ಥಿತಿ ಎದುರಾದರೂ ಕೋರ್ಟ್ ಕಚೇರಿಗೆ ಅಲೆಯದೇ ಗ್ರಾಮದಲ್ಲೇ ರಾಜೀ ಸಂಧಾನ ನಡೆಸಬೇಕು. ಒಬ್ಬರಿಗೊಬ್ಬರು ಪರಸ್ಪರ, ಪ್ರೀತಿ, ವಿಶ್ವಾಸದಿಂದ ಗ್ರಾಮದಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡಬೇಕು. ತಮ್ಮ ಬುದ್ಧಿವಂತಿಕೆಯನ್ನು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕು’ ಎಂದು ಮುಖಂಡರಿಗೆ ಕಿವಿ ಮಾತು ಹೇಳಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸುರೇಶಗೌಡ ಮಾತನಾಡಿ, ‘ಬಡಮಕ್ಕಳ ಶಿಕ್ಷಣಕ್ಕಾಗಿ ಚಿತ್ರದುರ್ಗ ಸಂಸದರ ಅನುದಾನದಲ್ಲಿ ₹50 ಲಕ್ಷ ಕೊಡಿಸಲಾಗುವುದು’ ಎಂದರು.
ತುಮಕೂರು ಮಾಧ್ಯಮ ಪ್ರತಿನಿಧಿ ಬೆಳಗೆರೆ ಜಯಣ್ಣ, ಡಿವೈಎಸ್ಪಿ ಟಿ.ಬಿ.ರಾಜಣ್ಣ, ಮಾಜಿ ಸೈನಿಕ ಅನಂತರಾಮ್, ನಿವೃತ್ತ ನೌಕರ ಶಶಿಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುಟ್ಟಸ್ವಾಮಿ, ಉಪಾಧ್ಯಕ್ಷೆ ರೂಪಾ ಮಾತನಾಡಿದರು.
ಮಾಜಿ ಅಧ್ಯಕ್ಷ ರವಿ, ಸದಸ್ಯೆ ಶಿವಲಿಂಗಮ್ಮ, ಲಿಂಗಣ್ಣ, ಮಾಜಿ ಸದಸ್ಯ ಕೆ.ಟಿ.ನಿಜಲಿಂಗಪ್ಪ, ಶ್ರೀಧರ್, ಟಿ.ಡಿ.ಎಲ್.ಗೌಡ, ಉಪನ್ಯಾಸಕ ವೆಂಕಟರಮಣ, ಮುಖಂಡ ನಟರಾಜ, ತಿಪ್ಪೇಸ್ವಾಮಿ, ಮಹಾಂತೇಶ್, ರಮೇಶ್, ಶ್ರೀನಿವಾಸ, ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.