ADVERTISEMENT

ದಾವಣಗೆರೆ | ಒಂದೇ ದಿನ 9 ಜನರ ಮಾದರಿ ಪ್ರಯೋಗಾಲಯಕ್ಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 13:22 IST
Last Updated 28 ಮಾರ್ಚ್ 2020, 13:22 IST

ದಾವಣಗೆರೆ: ಕೊರೊನಾ ವೈರಸ್‌ ಸೋಂಕಿಗೆ ಸಂಬಂಧಿಸಿದಂತೆ ಶನಿವಾರ ಒಂದೇ ದಿನ 9 ಮಂದಿಯ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಶನಿವಾರ ಇಬ್ಬರನ್ನು ಅವಲೋಕನದಲ್ಲಿ ಇಡಲಾಗಿದ್ದು, ಈವರೆಗೆ ಒಟ್ಟು 335 ಮಂದಿಯನ್ನು ಅವಲೋಕನಕ್ಕೆ ಒಳಪಡಿಸಿದಂತಾಗಿದೆ.

ದಾವಣಗೆರೆಯ ಆಸ್ಪತ್ರೆಯಲ್ಲಿರುವ ಚಿತ್ರದುರ್ಗದ ಮಹಿಳೆ ಮತ್ತು ದಾವಣಗೆರೆಯ ಯುವ ವೈದ್ಯ ಸೇರಿ ಇಬ್ಬರಲ್ಲಿ ಈ ವರೆಗೆ ಸೋಂಕು ಪತ್ತೆಯಾಗಿದೆ. ಉಳಿದ 41 ಪ್ರಕರಣಗಳಲ್ಲಿ 32 ನೆಗೆಟಿವ್‌ ಬಂದಿದೆ. 9 ಪ್ರಕರಣಗಳ ವರದಿ ಬರಬೇಕಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.