ADVERTISEMENT

ದಾವಣಗೆರೆ: ನಗರದಲ್ಲಿ ಆಕಾಶ್‌ ಬೈಜೂಸ್‌ ಕ್ಲಾಸ್‌ರೂಂ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 10 ಮೇ 2022, 11:51 IST
Last Updated 10 ಮೇ 2022, 11:51 IST
ದಾವಣಗೆರೆಯಲ್ಲಿ ಆರಂಭಿಸಿದ ಆಕಾಶ್+ಬೈಜೂಸ್ ಕ್ಲಾಸ್‌ರೂಂ ಕೇಂದ್ರವನ್ನು ಪ್ರಾದೇಶಿಕ ನಿರ್ದೇಶಕ ಧೀರಜ್‌ಕುಮಾರ್ ಮಿಶ್ರಾ ಅವರು ಮಂಗಳವಾರ ಉದ್ಘಾಟಿಸಿದರು. –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ಆರಂಭಿಸಿದ ಆಕಾಶ್+ಬೈಜೂಸ್ ಕ್ಲಾಸ್‌ರೂಂ ಕೇಂದ್ರವನ್ನು ಪ್ರಾದೇಶಿಕ ನಿರ್ದೇಶಕ ಧೀರಜ್‌ಕುಮಾರ್ ಮಿಶ್ರಾ ಅವರು ಮಂಗಳವಾರ ಉದ್ಘಾಟಿಸಿದರು. –ಪ್ರಜಾವಾಣಿ ಚಿತ್ರ   

ದಾವಣಗೆರೆ: ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಆಕಾಶ್‌+ಬೈಜೂಸ್‌ ಕ್ಲಾಸ್‌ರೂಂ ಕೇಂದ್ರ ನಗರದ ಎ.ವಿ.ಕೆ. ಕಾಲೇಜು ರಸ್ತೆಯಲ್ಲಿ ಆರಂಭಗೊಂಡಿದೆ.

ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಕಾಶ್‌+ಬೈಜೂಸ್‌ನ ದಕ್ಷಿಣ ವಿಭಾಗದ ಪ್ರಾದೇಶಿಕ ನಿರ್ದೇಶಕ ಧೀರಜ್‌ ಕುಮಾರ್‌ ಮಿಶ್ರಾ, ‘1998ರಿಂದ ಪರೀಕ್ಷಾ ಸಿದ್ಧತಾ ಸೇವೆಗಳ ಕ್ಷೇತ್ರದಲ್ಲಿ ಆಕಾಶ್‌ ಸೇವೆ ಸಲ್ಲಿಸುತ್ತಿದೆ. 24 ರಾಜ್ಯಗಳಲ್ಲಿ 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ವಾರ್ಷಿಕ 2.50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗುತ್ತಿದೆ. 8ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗುತ್ತದೆ. ದಾವಣಗೆರೆ ಕೇಂದ್ರದಲ್ಲೂ ನೀಟ್‌, ಜೆಇಇ, ಕೆಸಿಇಟಿಗಳಿಗೆ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.

‘ದಾವಣಗೆರೆ ಜಿಲ್ಲೆಯವರು ತಮ್ಮ ಸಮೀಪದ ಕೇಂದ್ರಗಳಿಗೆ ತೆರಳಿ ತರಬೇತಿ ಪಡೆಯುತ್ತಿದ್ದರು. ದಾವಣಗೆರೆಯ ಪೋಷಕರ ಬೇಡಿಕೆಯಂತೆ ಇದೀಗ ಇಲ್ಲಿಯೇ ತರಬೇತಿ ಕೇಂದ್ರವನ್ನು ಆರಂಭಿಸಿದ್ದೇವೆ. ರಾಷ್ಟ್ರೀಯ ಗುಣಮಟ್ಟದ ತರಬೇತಿಯನ್ನು ದಾವಣಗೆರೆ ವಿದ್ಯಾರ್ಥಿಗಳಿಗೂ ನೀಡುವ ಮೂಲಕ ಈ ಭಾಗದ ವಿದ್ಯಾರ್ಥಿಗಳೂ ನೀಟ್‌ ಹಾಗೂ ಜೆಇಇಗಳಲ್ಲಿ ಉತ್ತಮ ಸಾಧನೆ ತೋರುವಂತೆ ಮಾಡುತ್ತೇವೆ’ ಎಂದು ಹೇಳಿದರು.

ADVERTISEMENT

‘ತರಬೇತಿ ನೀಡಲು ನಮ್ಮದೇ ಆದ ಪಠ್ಯಕ್ರಮ ರೂಪಿಸಿದ್ದೇವೆ. ನುರಿತ ಬೋಧಕರನ್ನು ಪೂರ್ಣಾವಧಿಗಾಗಿ ನೇಮಕ ಮಾಡಿಕೊಂಡಿದ್ದೇವೆ. ಸ್ಥಳೀಯ ಕಾಲೇಜುಗಳು ಬಯಸಿದರೆ ಇಂಟಿಗ್ರೇಟೆಡ್‌ ಕೋರ್ಸ್‌ಗಳನ್ನೂ ನೀಡಲು ಸಿದ್ಧರಿದ್ದೇವೆ’ ಎಂದು ಧೀರಜ್‌ ಕುಮಾರ್‌ ಮಿಶ್ರಾ ತಿಳಿಸಿದರು.

‘ಆಕಾಶ್‌ನಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪರೀಕ್ಷೆ ಅಥವಾ ಎಎನ್‌ಟಿಎಚ್‌ಇಗೆ ನೋಂದಣಿ ಮಾಡಿಕೊಳ್ಳಬಹುದು. ದಾವಣಗೆರೆಯ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ದಾವಣಗೆರೆ ಕೇಂದ್ರದ ಮುಖ್ಯಸ್ಥ ಸುಮಂತ್‌ ಶೆಟ್ಟಿ, ‘ಇಲ್ಲಿನ ವಿದ್ಯಾರ್ಥಿಗಳು ನೀಟ್‌, ಜೆಇಇಗೆ ತರಬೇತಿ ಪಡೆಯಲು ಬೆಂಗಳೂರು, ಮಂಗಳೂರಿಗೆ ತೆರಳುತ್ತಿದ್ದರು. ವಿದ್ಯಾಕಾಶಿಯಾಗಿರುವ ದಾವಣಗೆರೆಯಲ್ಲೇ ಗುಣಮಟ್ಟದ ತರಬೇತಿ ಸಿಗಬೇಕು ಎಂಬ ಉದ್ದೇಶದಿಂದ ಇಲ್ಲಿ ಕೇಂದ್ರ ಆರಂಭಿಸಿದ್ದೇವೆ’ ಎಂದರು.

ಆಕಾಶ್‌+ಬೈಜೂಸ್‌ನ ಸಹಾಯಕ ನಿರ್ದೇಶಕ ಕಿಶೋರ್‌ ಎಂ., ಪ್ರಾದೇಶಿಕ ಮುಖ್ಯಸ್ಥ ಅರವಿಂದ ಕುಮಾರ್‌, ಡೆಪ್ಯೂಟಿ ಡೈರೆಕ್ಟರ್‌ ಸುಧೀರ್‌ ಕುಮಾರ್‌ ಎಸ್‌. ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.