ADVERTISEMENT

ವೀರಶೈವ ಪಂಚಮಸಾಲಿ ಸಮಾಜ: ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 13:43 IST
Last Updated 5 ಜೂನ್ 2023, 13:43 IST
5ಇಪಿ : ಹೊನ್ನಾಳಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಡಾ. ರಾಜ್‍ಕುಮಾರ್ ಅವರು ಉದ್ಘಾಟಿಸಿದರು.
5ಇಪಿ : ಹೊನ್ನಾಳಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಡಾ. ರಾಜ್‍ಕುಮಾರ್ ಅವರು ಉದ್ಘಾಟಿಸಿದರು.   

ಹೊನ್ನಾಳಿ: ‘ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜದ ಹಿಂದಿನ ಅಧ್ಯಕ್ಷರು ಹಾಗೂ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಮಾಜದ ಸಂಘಟನೆ ಮಾಡಲಾಗುವುದು’ ಎಂದು ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ಪಟ್ಟಣಶೆಟ್ಟಿ ವೀರಪ್ಪ ಹೇಳಿದರು.

ನಗರದಲ್ಲಿ ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜ 19ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಮ್ಮಿಕೊಂಡಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಮ್ಮ ಸಮಾಜದ ವಿದ್ಯಾರ್ಥಿಗಳು, ಉನ್ನತ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕು. ಸಮಾಜದ ಕಡುಬಡ ವಿದ್ಯಾರ್ಥಿಗಳಿದ್ದರೆ ಅಂಥವರಿಗೆ ಸಮಾಜದ ವತಿಯಿಂದ ಸಹಾಯಧನ ನೀಡಲಾಗುವುದು’ ಎಂದು ಅವರು ಹೇಳಿದರು.

ADVERTISEMENT

ಸಮಾಜದ ಗೌರವಾಧ್ಯಕ್ಷ ಡಾ.ರಾಜ್‍ಕುಮಾರ್ ಅವರು ಸಮಾರಂಭವನ್ನು ಉದ್ಘಾಟಿಸಿದರು.

ಹೊಳೆಸಿರಿಗೆರೆ ಎನ್. ಜಿ. ನಾಗನಗೌಡ ಹಾಗೂ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವಾಣಿಗುರು ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮುಖಂಡರಾದ ಕೆ. ಬೆನಕಪ್ಪ, ಹಾಲಪ್ಪ ಪಟ್ಟಣಶೆಟ್ಟಿ, ಕಾಯಿ ಬೆನಕಪ್ಪ, ಕೆ.ವಿ. ಪ್ರಸನ್ನ, ನಾಗಮ್ಮ, ಎಸ್. ವೀರೆಶ್ ಬೆಳಗುತ್ತಿ, ಇಡ್ಲಿ ರುದ್ರಪ್ಪ, ವಿಜಯಮ್ಮ, ಚಂದ್ರಶೇಖರಪ್ಪ ಕುಂಕೋದ ಅವರನ್ನು ಸನ್ಮಾನಿಸಿದರು.

ಕೆ.ಯು. ಮಂಜೇಶ್ವರ ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಾ ಎನ್.ಬಸವರಾಜ್ ಅವರು ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

ಪರಮೇಶ್ ಪಟ್ಟಣಶೆಟ್ಟಿ, ನ್ಯಾಮತಿ ವಾಗೀಶ್, ದಾವಣಗೆರೆ ಕಾಶಿನಾಥ, ಹಾಲೇಶ ಕುಂಕೊದ್, ಕೆವಿ ಪ್ರಸನ್ನ, ನಾಗಮ್ಮ ಎಸ್. ಒಡೆಯರಹತ್ತೂರು ಅಶೋಕ ಅವರು ಮಾತನಾಡಿದರು. ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ ರಾಜುಗೌಡ, ಎನ್‍.ಡಿ. ಪಂಚಾಕ್ಷರಪ್ಪ, ಯುವ ಘಟಕದ ಅಧ್ಯಕ್ಷ ಹಾಲೇಶ್, ಹೊನ್ನಾಳಿ ನಗರ ಘಟಕದ ಅಧ್ಯಕ್ಷ ಎಚ್.ಪಿ. ಗಿರೀಶ ಉಪಸ್ಥಿತರಿದ್ದರು.

6ಇಪಿ : ಹೊನ್ನಾಳಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷರಾದ ಪಟ್ಟಣಶೆಟ್ಟಿ ವೀರಪ್ಪ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.