ADVERTISEMENT

ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಅಗತ್ಯ: ನಿರ್ದೇಶಕ ವಿನಯ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 4:42 IST
Last Updated 3 ಫೆಬ್ರುವರಿ 2023, 4:42 IST
ವಿನಯ್‌
ವಿನಯ್‌   

ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ‘ಪ್ರಜಾವಾಣಿ’ಯು ಫೆ. 4ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ‘ಕ್ಯಾನ್ಸರ್‌ ಜಾಗೃತಿ ಜಾಥಾ’ದಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ. ಈ ಜಾಗೃತಿ ಕಾರ್ಯಕ್ರಮಕ್ಕೆ ಬರಲು ಕಾರಣವೆಂದರೆ ನಟ ಪುನೀತ್‌ ರಾಜಕುಮಾರ್‌. ಅವರ ಫಿಟ್‌ನೆಸ್‌ ಕಾಳಜಿ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಯಿಂದ ಸ್ಫೂರ್ತಿಗೊಂಡು ಈ ಜಾಥಾದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇನೆ.

ಕ್ಯಾನ್ಸರ್‌ ಪೀಡಿತರಾಗಿ ಗುಣವಾದ ಹಲವು ನಟ–ನಟಿಯರು, ಕ್ರೀಡಾಪಟುಗಳು ಹಾಗೂ ನಮ್ಮ ಸುತ್ತಮುತ್ತಲಿನ ಹಲವು ಮಹನೀಯರು ತಮಗೆ ಕಂಡು ಬಂದ ರೋಗ ಲಕ್ಷಣ, ತೆಗೆದುಕೊಂಡ ಚಿಕಿತ್ಸೆಯ ವಿವರ ತಿಳಿಸಿ ಮಾನಸಿಕ ದೃಢತೆಯನ್ನು ಪ್ರದರ್ಶಿಸುತ್ತಿರುವುದನ್ನು
ಕಾಣುತ್ತಿದ್ದೇವೆ. ಕ್ಯಾನ್ಸರ್‌ ಗೆದ್ದಿರುವ ದಾವಣಗೆರೆಯ ಕಲಾವಿದ ಆರ್‌.ಟಿ. ಅರುಣ್‌ಕುಮಾರ್‌ ಅವರೂ
ನಮ್ಮೆದುರಿಗೆ ಸ್ಫೂರ್ತಿಯ ಚಿಲುಮೆಯಂತಿದ್ದಾರೆ. ಇವರೊಂದಿಗೆ ನಾವೂ ಹೆಜ್ಜೆ ಹಾಕಿ ಜನರಲ್ಲಿ ಆರೋಗ್ಯ ಕಾಳಜಿ ಮೂಡಿಸುವ ಉತ್ಸಾಹ ಮೂಡಿದೆ. ಜನ ಜಾಗೃತಿಗೆ ಸಿನಿಮಾ ಸಹ ಅತ್ಯಂತ ಪರಿಣಾಮಕಾರಿ ಮಾಧ್ಯಮ. ಹೀಗಾಗಿ ಈ ಜಾಗೃತಿ ಜಾಥಾದಲ್ಲಿ ಪಾಲ್ಗೊಳ್ಳಲು
ಉತ್ಸುಕನಾಗಿದ್ದೇನೆ.

ಯವಜನರು ದುಶ್ಚಟಗಳಿಂದ ದೂರವಾಗಿ ಶಿಸ್ತುಬದ್ಧ ಜೀವನ ಪದ್ಧತಿ ರೂಢಿಸಿಕೊಳ್ಳಬೇಕಿದೆ. ಪ್ರತಿದಿನ ವ್ಯಾಯಮ ಹಾಗೂ ಉತ್ತಮ ಹವ್ಯಾಸಗಳಿರುವ ವೇಳಾಪಟ್ಟಿಯನ್ನು ಹಾಕಿಕೊಳ್ಳಬೇಕು. ಸಮತೋಲಿತ ಆಹಾರ ಪದ್ಧತಿಯನ್ನೂ ರೂಢಿಸಿಕೊಳ್ಳುವುದು ಅತ್ಯವಶ್ಯ. ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

ADVERTISEMENT

– ವಿನಯ್‌, ‘ದಿ’ ಚಿತ್ರದ ನಾಯಕ ನಟ, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.