ADVERTISEMENT

ಹರಿಹರ: ಬಂಡಾಯ ಸಾಹಿತ್ಯ ವಿಚಾರಸಂಕಿರಣ 29ಕ್ಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:06 IST
Last Updated 26 ಜನವರಿ 2023, 5:06 IST

ಹರಿಹರ: ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ತಾಲ್ಲೂಕು ಘಟಕದಿಂದ ಜನವರಿ 29ರಂದು ನಗರದ ಗುರುಭವನದಲ್ಲಿ ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಂವೇದನೆಯ ಬಹುರೂಪಗಳು’ ಕುರಿತು ವಿಚಾರಸಂಕಿರಣ ಮತ್ತು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 11ಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸುವರು. ಪತ್ರಕರ್ತ ಬಿ.ಎನ್.ಮಲ್ಲೇಶ್ ಅಧ್ಯಕ್ಷತೆ ವಹಿಸುವರು. ಡಾ.ಎ.ಬಿ.ರಾಮಚಂದ್ರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಎನ್.ರುದ್ರಮುನಿ, ಹಿರಿಯ ವಕೀಲ ರಾಮಚಂದ್ರ ಕಲಾಲ್, ರೈತ ಸಂಘದ ಮುಖಂಡ ತೇಜಸ್ವಿ ಪಟೇಲ್, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಭಾಗವಹಿಸುವರು.

ಮಧ್ಯಾಹ್ನ 12.30ಕ್ಕೆ ನಡೆಯುವ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಸ್ಥಿತ್ಯಂತರಗಳು’ ಕುರಿತು ಲೇಖಕಿ ತಾರಿಣಿ ಶುಭ ದಾಯಿನಿ, ‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆಯ ಸ್ವರೂಪ’ದ ಬಗ್ಗೆ ದಾದಾಪೀರ್ ನವಿಲೇಹಾಳ್, ‘ದಲಿತ ಬಂಡಾಯ ಸಂವೇದನೆ ಮತ್ತು ಚಳವಳಿ’ಯ ಕುರಿತು ರಾಜಪ್ಪ ದಳವಾಯಿ ಮಾತನಾಡುವರು. ಪ್ರೊ.ಸಿ.ವಿ.ಪಾಟೀಲ್ ಅಧ್ಯಕ್ಷತೆ ವಹಿಸುವರು.

ADVERTISEMENT

ಮದ್ಯಾಹ್ನ 3ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಎಚ್.ಎಲ್ ಪುಷ್ಪಾ ಆಶಯ ನುಡಿಗಳನ್ನಾಡುವರು. ಸುಕನ್ಯಾ ಮಾರುತಿ ಅಧ್ಯಕ್ಷತೆ ವಹಿಸುವರು. ನಾಡಿನ ವಿವಿಧ 25 ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಲೇಖಕ ಜೆ.ಕಲಿಂಬಾಷಾ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಬಿ.ಎಂ.ಹನೀಫ್, ಮುಖಂಡರಾದ ಸಿದ್ಧನಗೌಡ ಪಾಟೀಲ್, ಎ.ಗೋವಿಂದರೆಡ್ಡಿ, ಎಚ್.ವಿಶ್ವನಾಥ್, ಭಕ್ತರಳ್ಳಿ ಕಾಮರಾಜ್, ಎಚ್.ನಿಜಗುಣ ಭಾಗವಹಿಸುವರು ಎಂದು ಸಂಘಟನೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.