ADVERTISEMENT

ಬಸವಣ್ಣ ‘ಸಾಂಸ್ಕೃತಿಕ ರಾಯಭಾರಿ’ ಎಂದು ಘೋಷಿಸಲಿ

ಲಿಂಗಾಯತ ಪಂಚಮಸಾಲಿ ಮಹಾಪೀಠ ಕೂಡಲ ಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 14:59 IST
Last Updated 5 ಜೂನ್ 2019, 14:59 IST
ದಾವಣಗೆರೆಯ ಚಿಂದೋಡಿ ಲೀಲಾ ಸ್ಮಾರಕದ ಬಳಿ (ಬಾಡ ಕ್ರಾಸ್) ಕಾಯದ ದಾಸೋಹ ಮಂಟಪ 140ನೇ ಬಸವ ಸಂಗಮ ಮತ್ತು ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿಯವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿದರು. (ಎಡದಿಂದ) ಉಮಾ, ಮಹಾನಗರ ಪಾಲಿಕೆ ಪೌರನೌಕರರ ಸಂಘ ಅಧ್ಯಕ್ಷ ಕೆ.ಎಸ್‌.ಗೋವಿಂದರಾಜ್, ಅವರಗೆರೆ ರುದ್ರಮುನಿ, ಶ್ರೀಧರ್ ಪಾಟೀಲ ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಚಿಂದೋಡಿ ಲೀಲಾ ಸ್ಮಾರಕದ ಬಳಿ (ಬಾಡ ಕ್ರಾಸ್) ಕಾಯದ ದಾಸೋಹ ಮಂಟಪ 140ನೇ ಬಸವ ಸಂಗಮ ಮತ್ತು ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿಯವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿದರು. (ಎಡದಿಂದ) ಉಮಾ, ಮಹಾನಗರ ಪಾಲಿಕೆ ಪೌರನೌಕರರ ಸಂಘ ಅಧ್ಯಕ್ಷ ಕೆ.ಎಸ್‌.ಗೋವಿಂದರಾಜ್, ಅವರಗೆರೆ ರುದ್ರಮುನಿ, ಶ್ರೀಧರ್ ಪಾಟೀಲ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಇಡೀ ಜಗತ್ತಿನ ಜನ ಗೌರವಿಸುವ, ಎಲ್ಲಾ ಜನಾಂಗದವರು ಒಪ್ಪಿಕೊಳ್ಳುವ ಬಸವಣ್ಣನನ್ನು ರಾಜ್ಯ ಸರ್ಕಾರ ‘ಸಾಂಸ್ಕೃತಿಕ ರಾಯಭಾರಿ’ ಎಂದು ಘೋಷಿಸಬೇಕು ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲ ಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಬಾಡ ಕ್ರಾಸ್‌ನಲ್ಲಿರುವ ಚಿಂದೋಡಿ ಲೀಲಾ ಸ್ಮಾರಕದ ಬಳಿ ಬುಧವಾರ ಆಯೋಜಿಸಿದ್ದ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ಕಾಯದ ದಾಸೋಹ ಮಂಟಪ, 140ನೇ ಬಸವ ಸಂಗಮ ಹಾಗೂ ಬಸವಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ, ಕೋಲ್ಕತ್ತಾದಲ್ಲಿ ಸ್ವಾಮಿ ವಿವೇಕಾನಂದ, ಬಿಹಾರದಲ್ಲಿ ಜಯಪ್ರಕಾಶ್ ನಾರಾಯಣ್ ಅವರನ್ನು ‘ಸಾಂಸ್ಕೃತಿಕ ರಾಯಭಾರಿ’ಗಳನ್ನಾಗಿ ಘೋಷಿಸಲಾಗಿದೆ. ಅದರಂತೆ ಬಸವಣ್ಣ ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕ. ಕನಕದಾಸರ ಭಕ್ತಿ, ಷರೀಫರ ಭಾವೈಕ್ಯ, ಸರ್ವಜ್ಞನ ಕ್ರಾಂತಿಕಾರಿ ಹಾಗೂ ದಾರ್ಶನಿಕ ವಿಚಾರಗಳು ಬಸವಣ್ಣನ ವಚನಗಳಲ್ಲಿವೆ. ಭಾವೈಕ್ಯ, ಕಾಯಕಪ್ರಜ್ಞೆ, ಆಧುನಿಕ ಸಮಸ್ಯೆಗಳಿಗೆ ಬಸವಣ್ಣನ ವಚನಗಳಲ್ಲಿ ಉತ್ತರವಿದೆ ಎಂದು ಹೇಳಿದರು.

ADVERTISEMENT

ಬೇರೆ ಭಾಷೆಗಳನ್ನು ಕಲಿಯುವುದು ಅವರ ವೈಯಕ್ತಿಕ ವಿಚಾರ, ಆದರೆ ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ. ಬಸವಣ್ಣನವರು ಕನ್ನಡಕ್ಕೆ ಪ್ರಾಧ್ಯಾನ್ಯತೆ ನೀಡುವ ಉದ್ದೇಶದಿಂದ ದೇವಭಾಷೆ ಸಂಸ್ಕೃತವನ್ನು ಬದಿಗೊತ್ತಿ ಕನ್ನಡದಲ್ಲಿ ವಚನಗಳನ್ನು ರಚಿಸಿದರು. ಆಡಳಿತ ಭಾಷೆಯಾಗಿ ಕನ್ನಡ ಬಳಸಿದರು. 7 ರಾಜ್ಯಗಳಲ್ಲಿ ಮಾತನಾಡುವ ಹಿಂದಿಯನ್ನು ಕನ್ನಡಿಗರ ಮೇಲೆ ಒತ್ತಾಯಪೂರ್ವಕವಾಗಿ ಹೇರುವುದು ಸರಿಯಲ್ಲ. ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮರಾಠಿ, ಮಲಯಾಳಂಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ಮಹಾನಗರ ಪಾಲಿಕೆ ಪೌರನೌಕರರ ಸಂಘದ ಅಧ್ಯಕ್ಷ ಗೋವಿಂದರಾಜ್, ದಾವಣಗೆರೆ ವಿಶ್ವಮಂಟಪದ ಆವರಗೆರೆ ರುದ್ರಮುನಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಮ್ಮ, ಮರುಳಸಿದ್ದಯ್ಯ ಬಸವನಾಳ್, ಶ್ರೀಧರಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.