ನ್ಯಾಮತಿ: ಪಟ್ಟಣದ ಹೊರವಲಯದ ಕುಮಟಾ- ಕಾರಮಡಗಿ ಹೆದ್ದಾರಿಯ ದಾನಿಹಳ್ಳಿ ಬನ್ನಾಪುರದ ಹಳ್ಳದ ಬಳಿ ಬುಧವಾರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದವರಿಗೆ ಕರಡಿಯ ದರ್ಶನವಾಗಿದೆ.
ಹೊನ್ನಾಳಿ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗುತ್ತಿರುವಾಗ ರಸ್ತೆಯ ಬಲಬದಿಯಿಂದ ಕರಡಿಯೊಂದು ಎಡಬದಿಗೆ ಹೋಗುತ್ತಿರುವುದನ್ನು ನೋಡಿದೆವು. ಚಿತ್ರ ಸೆರೆಹಿಡಿಯಲು ಸಾಧ್ಯವಾಗಲಿಲ್ಲ ನಂತರ ಅದರ ಹೆಜ್ಜೆ ಗುರುತನ್ನು ಚಿತ್ರ ತೆಗೆದೆವು. ನಮಗೂ ಕರಡಿಗೂ ಸ್ವಲ್ಪ ಅಂತರವಿದ್ದು ಕರಡಿ ನಮ್ಮನ್ನು ಗಮನಿಸಲಿಲ್ಲ. ಈ ಭಾಗದಲ್ಲಿ ಜಮೀನುಗಳು ಬಿತ್ತನೆಗೆ ಆಗದೆ ಬಯಲು ಪ್ರದೇಶವಾಗಿದ್ದರಿಂದ ಕರಡಿ ಸಂಚಾರ ಕಂಡು ಬಂದಿತು ಎಂದು ಸುರಹೊನ್ನೆ ನಿವಾಸಿಗಳಾದ ಯುಧಿಷ್ಠರ ಮತ್ತು ಕಳ್ಳಳ್ಳಿ ಪುಟ್ಟಪ್ಪ ಮಾಹಿತಿ ನೀಡಿದರು.
‘ಈ ರಸ್ತೆಯಲ್ಲಿ ವಾಯುವಿಹಾರಕ್ಕೆ, ದ್ವಿಚಕ್ರ ವಾಹನ ಸವಾರರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಅರಣ್ಯ ಇಲಾಖೆಯವರು ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.