ADVERTISEMENT

ಬೆನಕನಹಳ್ಳಿ: ನೂತನ ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2025, 14:16 IST
Last Updated 30 ಮೇ 2025, 14:16 IST
ಸಾಸ್ವೆಹಳ್ಳಿ ಸಮೀಪದ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಎ.ಕೆ. ರೇಷ್ಮಾ ಅವರನ್ನು ಅಭಿನಂದಿಸಲಾಯಿತು
ಸಾಸ್ವೆಹಳ್ಳಿ ಸಮೀಪದ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಎ.ಕೆ. ರೇಷ್ಮಾ ಅವರನ್ನು ಅಭಿನಂದಿಸಲಾಯಿತು   

ಸಾಸ್ವೆಹಳ್ಳಿ: ಸಮೀಪದ ಬೆನಕನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎ.ಕೆ. ರೇಷ್ಮಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜ್ಯೋತಿ ತಿಳಿಸಿದರು.

15 ಸದಸ್ಯಬಲದ ಪಂಚಾಯಿತಿಯಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಎ.ಕೆ.ರೇಷ್ಮಾ ಹೊರತು ಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿರಲಿಲ್ಲ.

ಸದಸ್ಯರಾದ ಕೆ. ಭಾಗ್ಯಮ್ಮ, ಎ.ಕೆ. ಗದ್ದಿಗೇಶ್, ಎಂ. ಸುಧಾ, ಡಿ.ಎಸ್. ದೀಪಾ, ಎಚ್.ಪಿ.ಹಾಲೇಶ್, ಟಿ.ವಿ. ಉಷಾ, ಪಿ.ಕಾವ್ಯ ಪಿ,. ಮಂಜುನಾಥ, ಗ್ರಾಮ ಪಂಚಾಯಿತಿ ಸಿಬಂದಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.