ಹರಿಹರ: ಹಳ್ಳದ ಚೆಕ್‌ಡ್ಯಾಂನಲ್ಲಿ ಈಜಾಡಲು ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬಾನುವಳ್ಳಿ ಗ್ರಾಮದ ಸಮೀಪ ಈಚೆಗೆ ನಡೆದಿದ್ದು, ತಡವಾಗಿ ಗೊತ್ತಾಗಿದೆ.
ಬಾನುವಳ್ಳಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ಮೊಹ್ಮದ್ ತನ್ವೀರ್ (13) ಮೃತ ಬಾಲಕ.
ವಿವರ: ಗ್ರಾಮ ಸಮೀಪದ ರಾಯಪುರ ರಸ್ತೆಯಲ್ಲಿರುವ ದೊಡ್ಡಹಳ್ಳದ ಚೆಕ್‌ಡ್ಯಾಂನಲ್ಲಿ ಈಜಾಡಿ ಬರುವುದಾಗಿ ಸಂಜೆ 4ಕ್ಕೆ ಹೊರಟಿದ್ದ ತನ್ವೀರ್ ಮನೆಗೆ ಮರಳಿರಲಿಲ್ಲ. ಆಗ ಹಳ್ಳಕ್ಕೆ ಈಜುಗಾರರೊಂದಿಗೆ ಹೋಗಿ ಹುಡುಕಾಡಿದಾಗ ಮಧ್ಯರಾತ್ರಿ ಶವ ಪತ್ತೆಯಾಯಿತು.
ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.