ADVERTISEMENT

ಮತದಾನ ಜಾಗೃತಿಗಾಗಿ ಮಹಿಳೆಯರಿಂದ ಕಾರ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 2:31 IST
Last Updated 12 ಏಪ್ರಿಲ್ 2019, 2:31 IST
ಎಲ್ನೋಡಿ ಕಾರ್‌. ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ
ಎಲ್ನೋಡಿ ಕಾರ್‌. ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ   

ದಾವಣಗೆರೆ: ಮಹಿಳೆಯರ ಕಾರುಗಳ ಕಲರವ. ಅದಕ್ಕೆ ಹಿಮ್ಮೇಳ ಎಂಬಂತೆ ಡೊಳ್ಳು ಕುಣಿತ, ನಂದಿಕೋಲು ಸಮಾಳ, ಹಗಲುವೇಷ ಮತ್ತು ಗೊಂಬೆ ಕಲಾತಂಡಗಳ ವೈಭವ.

ಇದು ಲೋಕಸಭಾ ಚುನಾವಣೆ-2019 ರ ಅಂಗವಾಗಿ ಸ್ವೀಪ್ ವತಿಯಿಂದ ಗುರುವಾರ ನಗರದ ಹೈಸ್ಕೂಲ್ ಮೈದಾನದಿಂದ ಏರ್ಪಡಿಸಲಾಗಿದ್ದ ಮಹಿಳಾ ಕಾರ್‌ ರ‍್ಯಾಲಿಯಲ್ಲಿ ಕಂಡು ಬಂದ ದೃಶ್ಯಗಳು.

ಚುನಾವಣಾ ಸಾಮಾನ್ಯ ವೀಕ್ಷಕ ಆನಂದ್ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ ಎಚ್. ಬಸವರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌. ಚೇತನ್ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಹಸಿರು ನಿಶಾನೆ ತೋರುವ ಮೂಲಕ ಈ ರ‍್ಯಾಲಿಗೆ ಚಾಲನೆ ನೀಡಿದರು.

ADVERTISEMENT

ದಾವಣಗೆರೆಯಿಂದ ಚನ್ನಗಿರಿ, ಹರಿಹರ ಮತ್ತು ಹೊನ್ನಾಳಿ ತಾಲ್ಲೂಕುಗಳ ಮಾರ್ಗವಾಗಿ ಸಾಗಿ ಪುನಃ ದಾವಣಗೆರೆ ತಲುಪಿತು. ಸುಮಾರು 200 ಕಿಲೋಮೀಟರ್‌ ಸಾಗಿ ಜಾಗೃತಿ ಮೂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.