ದಾವಣಗೆರೆ: ಬೈಕಲ್ಲಿ ಬಂದು ಮಹಿಳೆಯರ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡು ಹೋಗುವ ಪ್ರಕರಣಗಳು ಮತ್ತೆ ಜಾಸ್ತಿಯಾಗುತ್ತಿದೆ. ಗುರುವಾರ ವಿನೋಬನಗರದ ಮಹಿಳೆ ಗುರುವಾರ ₹ 1.2 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಇದೇ ರೀತಿ ಕಳೆದುಕೊಂಡಿದ್ದಾರೆ.
ವಿನೋಬನಗರ ಮೂರನೇ ಮೇನ್, ಒಂದನೇ ಕ್ರಾಸ್‌ನ ಸೋಮಶೇಖರಪ್ಪ ಅವರ ಪತ್ನು ಚನ್ನಮ್ಮ (54) ಗುರುವಾರ ಮಧ್ಯಾಹ್ನ ಸಾಯಿಬಾಬಾ ದೇವಸ್ಥಾನಕ್ಕೆ ಹೊರಟಿದ್ದರು. ಎಂಸಿಸಿ ಎ ಬ್ಲಾಕ್‌ನ 1ನೇ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಒಂದು ಅವರ ಪಕ್ಕಕ್ಕೆ ಬಂದಿದ್ದು, ಚನ್ನಮ್ಮ ಅವರ ಕುತ್ತಿಗೆಗೆ ಹಿಂಬದಿ ಸವಾರ ಕೂ ಹಾಕಿ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ಕೂಡಲೇ ಬೈಕ್ ಮುಂದಕ್ಕೆ ಸಾಗಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.