ಸುಣ್ಣಿಗೆರೆ (ಚನ್ನಗಿರಿ): ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಸ್ಥಳೀಯರನ್ನು ನೇಮಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಸುಣ್ಣಿಗೆರೆ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಸ್ಥಳೀಯ ಮಹಿಳೆಯರಿಗೆ ಕಾರ್ಯಕರ್ತೆ ಹುದ್ದೆ ನೀಡಬೇಕು ಎಂಬ ನಿಯಮವಿದೆ. ಹೊನ್ನಾಳಿ ತಾಲ್ಲೂಕಿನಿಂದ ಬೇರೊಬ್ಬರನ್ನು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಗ್ರಾಮದಲ್ಲಿ ಅಂಗವಿಕಲ, ವಿಧವಾ ಹಾಗೂ ವಿದ್ಯಾವಂತ ಮಹಿಳೆಯರಿದ್ದು, ಅವರಿಗೆ ಅವಕಾಶ ಕಲ್ಪಿಸದೇ ಪಕ್ಕದ ತಾಲ್ಲೂಕಿನವರನ್ನು ನೇಮಿಸಲಾಗಿದೆ. ವರ್ಗಾವಣೆ ರದ್ದುಗೊಳಿಸಿ ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
‘ಮೇಲಧಿಕಾರಿಗಳ ಆದೇಶ ಪಾಲಿಸಿದ್ದೇವೆ. ಸ್ಥಳೀಯ ಮಹಿಳೆಗೆ ಅವಕಾಶ ಕಲ್ಪಿಸುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಆರ್. ನಿರ್ಮಲಾ ತಿಳಿಸಿದರು.
ವಿಜಯ ಕುಮಾರ್, ಎಸ್.ಆರ್. ಮಂಜುಳಾ, ವೀಣಾದೇವಿ, ರತ್ನಮ್ಮ, ಪ್ರಕಾಶ್, ಶಶಿಕುಮಾರ್, ದೀಪಾ, ಹರೀಶ್, ಲೀಲಾವತಿ, ಪವಿತ್ರಾ, ರೇಣುಕಮ್ಮ, ಮಲ್ಲಿಕಾರ್ಜುನ್, ಪ್ರವೀಣ್, ಲಿಂಗರಾಜು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.