ಸಾಸ್ವೆಹಳ್ಳಿ: ದೀಪಾವಳಿ ನಿಮಿತ್ತ ಗ್ರಾಮದಲ್ಲಿ ರೈತರು, ಮಹಿಳೆಯರಿಂದ ಅಗತ್ಯ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು.
ತರಕಾರಿ, ಹೂವು, ಹಣ್ಣು, ಪಟಾಕಿ, ಬಟ್ಟೆ, ದಿನಸಿ ಸಾಮಾನುಗಳ ಬೆಲೆ ಗಗನಕ್ಕೆ ಏರಿದ್ದರೂ ಹಬ್ಬದ ಸಂಭ್ರಮ ಜನರಲ್ಲಿತ್ತು.
ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಮೆಕ್ಕೆಜೋಳ, ರಾಗಿ ಕಟಾವಿಗೆ ಬಂದಿದೆ. ಹಬ್ಬ ಮುಗಿದ ಮರುದಿನವೇ ಕಟಾವು ಕಾರ್ಯವನ್ನು ರೈತರು ಆರಂಭಿಸಲಿದ್ದಾರೆ.
ನರಕ ಚತುರ್ದಶಿಯ ದಿನ ಅಭ್ಯಂಜನ ಸ್ನಾನ, ಲಕ್ಷ್ಮಿ ಪೂಜೆ, ಅಮಾವಾಸ್ಯೆ ಪೂಜೆ ನಡೆಯಿತು. ರೈತರು ಕೃಷಿ ಉಪಕರಣಗಳನ್ನು ಕಾಲುವೆಗಳಲ್ಲಿ ತೊಳೆಯುವುದು ಕಂಡು ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.