ದಾವಣಗೆರೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಿಲ್ಲಾ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಸಲಾಯಿತು ಎಂದು ಮಹಾಸಭಾದ ನೂತನ ದಾವಣಗೆರೆ ಜಿಲ್ಲಾ ಪ್ರತಿನಿಧಿ ಆನಂದ ತೀರ್ಥಚಾರ್ಯ ತಿಳಿಸಿದರು.
ಏಪ್ರಿಲ್ 13ರಂದು ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ನಾಗಭೂಷಣ್ ವಿರುದ್ಧ 216 ಮತಗಳ ಅಂತರದಿಂದ ಗೆಲುವು ಪಡೆದಿದ್ದೇನೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
‘31 ಜಿಲ್ಲೆಗಳ ಪೈಕಿ ಅಶೋಕ ಹಾರನಹಳ್ಳಿ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಭಾನುಪ್ರಕಾಶ ಶರ್ಮ ತಂಡದ 21 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದೇವೆ. ಅಶೋಕ ಹಾರನಹಳ್ಳಿ ಅವರು ಈ ಹಿಂದೆ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ’ ಎಂದರು.
‘ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ವಧು– ವರರ ಶೋಧನೆ ದೊಡ್ಡ ಸಮಸ್ಯೆಯಾಗಿದ್ದು, ಈ ಬಗ್ಗೆ ಸಮಾವೇಶ ಆಯೋಜಿಸಲಾಗುವುದು’ ಎಂದು ತಿಳಿಸಿದರು.
‘ಜಾತಿಜನಗಣತಿಯು ನ್ಯೂನತೆಯಿಂದ ಕೂಡಿದ್ದು, ವಿಪ್ರ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಆಗಿರುವ ಪ್ರಮಾದವನ್ನು ಸರ್ಕಾರ ಸರಿಪಡಿಸಬೇಕು’ ಎಂದು ಮುಖಂಡ ಪಿ.ಸಿ.ಶ್ರೀನಿವಾಸ್ ಹೇಳಿದರು.
ಮುಖಂಡರಾದ ರಾಮಚಂದ್ರ, ಅನಿಲ್ ಬಾರಂಗಳ್, ನಿರಂಜನ, ಸತ್ಯನಾರಾಯಣ, ಬಾಲಕೃಷ್ಣ ವೈದ್ಯ, ಉಮೇಶ ಕುಲಕರ್ಣಿ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.