ADVERTISEMENT

ಹರಿಹರ ನಗರಸಭೆ ಸಿಬ್ಬಂದಿಗೆ ಯೋಜನಾಧಿಕಾರಿ ತರಾಟೆ

ಕೆಲಸ ಮಾಡದಿದ್ದರೆ ಶಿಸ್ತು ಕ್ರಮ ಎದುರಿಸಿ: ಮಹಾಂತೇಶ್

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 4:44 IST
Last Updated 8 ಆಗಸ್ಟ್ 2025, 4:44 IST
ಹರಿಹರ ನಗರಸಭೆ ಕಚೇರಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಯೋಜನಾಧಿಕಾರಿ  ಎನ್.ಮಹಾಂತೇಶ್ ಅವರು ಬಾಕಿ ಇರುವ ಕಡತಗಳನ್ನು ಪರಿಶೀಲಿಸಿದರು
ಹರಿಹರ ನಗರಸಭೆ ಕಚೇರಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಯೋಜನಾಧಿಕಾರಿ  ಎನ್.ಮಹಾಂತೇಶ್ ಅವರು ಬಾಕಿ ಇರುವ ಕಡತಗಳನ್ನು ಪರಿಶೀಲಿಸಿದರು   

ಹರಿಹರ: ಇಲ್ಲಿನ ನಗರಸಭೆ ಕಚೇರಿಗೆ ಗುರುವಾರ ಭೇಟಿ ನೀಡಿದ್ದ ಜಿಲ್ಲಾ ಯೋಜನಾಧಿಕಾರಿ ಎನ್.ಮಹಾಂತೇಶ್, ವಿಲೇವಾರಿಗೆ ಬಾಕಿ ಇದ್ದ ಅಧಿಕ ಸಂಖ್ಯೆಯ ಕಡತಗಳನ್ನು ಗಮನಿಸಿ ಸಿಬ್ಬಂದಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.

ಕಂದಾಯ ಶಾಖೆಯಲ್ಲಿ ವಿವಿಧ ಗುಮಾಸ್ತರು, ಬಿಲ್ ಕಲೆಕ್ಟರ್, ಕಂದಾಯ ಅಧಿಕಾರಿಗಳ ಬಳಿ ಬಾಕಿ ಇರುವ ಬಿ ಖಾತಾ ಹಾಗೂ ಇತರೆ ಕಡತಗಳನ್ನು ಅವರು ಪರಿಶೀಲಿಸಿದರು.

‘ಜನರನ್ನು ಓಡಾಡಿಸಬೇಡಿ, ನಿಮ್ಮ ಪಾಲಿನ ಕೆಲಸವನ್ನು ನಿಗದಿತ ಅವಧಿಯೊಳಗೆ ಮಾಡಿ ಮುಗಿಸಿ. ಇಲ್ಲದಿದ್ದರೆ ಶಿಸ್ತು ಕ್ರಮ ಎದುರಿಸಲು ಸಿದ್ಧರಾಗಿ’ ಎಂದು ಎಚ್ಚರಿಸಿದರು.

ADVERTISEMENT

ಪೌರಾಯುಕ್ತ ನಾಗಣ್ಣ, ಕಂದಾಯ ಅಧಿಕಾರಿ ಶಿವಕುಮಾರ್, ಕಂದಾಯ ನಿರೀಕ್ಷಕರಾದ ಚೈತ್ರಾ, ರಮೇಶ್, ಬಿಲ್ ಕಲೆಕ್ಟರ್‌ಗಳಾದ ಅಣ್ಣಪ್ಪ, ಪರಸಪ್ಪ, ಗುತ್ಯಪ್ಪ, ರಾಮು ಅವರೊಂದಿಗೆ ಮಹಾಂತೇಶ್ ಮಾತನಾಡಿದರು. ಅರ್ಜಿದಾರರು ಜಿಲ್ಲಾಧಿಕಾರಿಗೆ ದೂರು ನೀಡುತ್ತಿದ್ದು, ಜನರ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ವೇಳೆ ಜಿಲ್ಲಾ ಯೋಜನಾಧಿಕಾರಿಯನ್ನು ಭೇಟಿ ಮಾಡಿದ ಸಾರ್ವಜನಿಕರು, ಅರ್ಜಿ ಕೊಟ್ಟು ಹಲವು ತಿಂಗಳಿಂದ ನಗರಸಭೆಗೆ ಸುತ್ತಾಡುತ್ತಿದ್ದರೂ ಕೆಲಸ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Quote - ಕಂದಾಯ ಆರೋಗ್ಯ ಎಂಜಿನಿಯರಿಂಗ್ ಶಾಖೆಗಳಲ್ಲಿ ಖಾಲಿಯಿರುವ ಸಿಬ್ಬಂದಿ ಭರ್ತಿಗೆ ಕ್ರಮಕೈಗೊಳ್ಳಲಾಗಿದೆ. ಹೊಸ ಕಟ್ಟಡ ಕಾಮಗಾರಿ ಬೇಗ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದೆ ಎನ್.ಮಹಾಂತೇಶ್ ಜಿಲ್ಲಾ ಯೋಜನಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.