ADVERTISEMENT

ಕಡರನಾಯ್ಕನಹಳ್ಳಿ | ಸಾಲ ಬಾಧೆ; ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 16:28 IST
Last Updated 30 ಜೂನ್ 2025, 16:28 IST
ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಕೆ ಹೆಚ್ ಕಾಶಿನಾಥ್
ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಕೆ ಹೆಚ್ ಕಾಶಿನಾಥ್   

ಕಡರನಾಯ್ಕನಹಳ್ಳಿ: ಗ್ರಾಮದ ರೈತ ಕೆ.ಎಚ್. ಕಾಶಿನಾಥ್ (38) ಭಾನುವಾರ ತಡರಾತ್ರಿ ಸಾಲಬಾಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಕಡರನಾಯ್ಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹ 2 ಲಕ್ಷ ಸಾಲ ಪಡೆದಿದ್ದರು. ಎರಡು ಎಕರೆ ಜಮೀನಿನಲ್ಲಿ ಇಳುವರಿ ಕಡಿಮೆ ಮತ್ತು ಈ ಬಾರಿ ಬತ್ತದ ದರ ಕಡಿಮೆ ಇರುವುದರಿಂದ ಬೇಸತ್ತಿದ್ದರು’ ಎಂದು ಸಹೋದರ ಕೆ.ಎಚ್. ತಿಪ್ಪೇಸ್ವಾಮಿ ಮಲೇಬೆನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT