ADVERTISEMENT

ಜಗಳೂರು: ಎಪಿಎಂಸಿಗೆ ಬೀಗ ಹಾಕಿ ರೈತರ ಪ್ರತಿಭಟನೆ

ರಾಗಿ ಖರೀದಿ ಕೇಂದ್ರದಲ್ಲಿ ಪಾವತಿಯಾಗದ ಹಣ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 6:32 IST
Last Updated 19 ಮಾರ್ಚ್ 2023, 6:32 IST
ಜಗಳೂರಿನ ರಾಗಿ ಖರೀದಿ ಕೇಂದ್ರದಲ್ಲಿ ಎರಡು ತಿಂಗಳಾದರೂ ಹಣ ಪಾವತಿಸುತ್ತಿಲ್ಲ ಎಂದು ಆರೋಪಿಸಿ ರೈತರು ಶನಿವಾರ ಎಪಿಎಂಸಿಗೆ ಬೀಗ ಹಾಕಿ‌ ಪ್ರತಿಭಟನೆ ನಡೆಸಿದರು.
ಜಗಳೂರಿನ ರಾಗಿ ಖರೀದಿ ಕೇಂದ್ರದಲ್ಲಿ ಎರಡು ತಿಂಗಳಾದರೂ ಹಣ ಪಾವತಿಸುತ್ತಿಲ್ಲ ಎಂದು ಆರೋಪಿಸಿ ರೈತರು ಶನಿವಾರ ಎಪಿಎಂಸಿಗೆ ಬೀಗ ಹಾಕಿ‌ ಪ್ರತಿಭಟನೆ ನಡೆಸಿದರು.   

ಜಗಳೂರು: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಿದ್ದು, ಎರಡು ತಿಂಗಳು ಕಳೆದಿದ್ದರೂ ಹಣ ಪಾವತಿಸದೆ ಸತಾಯಿಸಲಾಗುತ್ತಿದೆ ಎಂದು ಆರೊಪಿಸಿ ರೈತರು ಶನಿವಾರ ಇಲ್ಲಿನ ಎಪಿಎಂಸಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಎರಡು ತಿಂಗಳ‌ ಹಿಂದೆ ರಾಗಿ ಖರೀದಿಸಿದ್ದು, ಇದುವರೆಗೂ ಹಣ ಪಾವತಿಸದೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಬಡ ರೈತರ ಅನುಕೂಲಕ್ಕಾಗಿ ಸರ್ಕಾರ ರಾಗಿ ಖರೀದಿ ಕೇಂದ್ರ ತೆರೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಹಣ ಪಾವತಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತರು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸಂತೋಷ್ ಕುಮಾರ್, ದಾಖಲೆಗಳನ್ನು ಪರಿಶೀಲಿಸಿ ಹಣಪಾವತಿಸಲು ಎಪಿಎಂಸಿ ಸಿಬ್ಬಂದಿಗೆ ಸೂಚಿಸಿದರು.

ADVERTISEMENT

ರೈತ ಮುಖಂಡರಾದ ಬಸವರಾಜ, ರವಿಕುಮಾರ, ಹೊಸಕೆರೆ ಕಲ್ಲೇಶ್, ಗೌರಿಪುರ ಸುರೇಶ್, ಉದ್ಘಟ್ಟ ಬಸವರಾಜ್, ಗಡಿಮಾಕುಂಟೆ, ಚಿಕ್ಕ ಬನ್ನಿ ಹಟ್ಟಿ, ಕೆಚ್ಚೇನಹಳ್ಳಿ, ಮೆದಿಕೇರನಹಳ್ಳಿ, ಬಸಪ್ಪನಹಟ್ಟಿ ಗ್ರಾಮದ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.