ADVERTISEMENT

ಚನ್ನಗಿರಿ: ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಉಚಿತ ಕಾರ್ಯಾಗಾರ ನಾಳೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:14 IST
Last Updated 12 ಆಗಸ್ಟ್ 2022, 5:14 IST
ಹೊದಿಗೆರೆ ರಮೇಶ್
ಹೊದಿಗೆರೆ ರಮೇಶ್   

ಚನ್ನಗಿರಿ: ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪದವೀಧರ ವಿದ್ಯಾರ್ಥಿಗಳಿಗೆ ‘ಭರವಸೆಯ ಬೆಳಕು’ ಒಂದು ದಿನದ ಉಚಿತ ಕಾರ್ಯಾಗಾರವನ್ನು ‘ಹೊದಿಗೆರೆ ರಮೇಶ್ ಅಭಿಮಾನಿಗಳ ಬಳಗ’, ಕಿಚ್ಚ ಸುದೀಪ್ ಅಭಿಮಾನಿಗಳ ಬಳಗ, ವಾಲ್ಮೀಕಿ ನಾಯಕರ ಯುವ ಪಡೆ ಹಾಗೂ ರವಿ ಡಿ. ಚನ್ನಣ್ಣನವರ್ ಅಭಿಮಾನಿಗಳ ಬಳಗದ ಸಹಯೋಗದಲ್ಲಿ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಆ. 13ರಂದು ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊದಿಗೆರೆ ರಮೇಶ್, ‘ತಾಲ್ಲೂಕು ಅಡಿಕೆ ಬೆಳೆಗೆ ಹೆಸರುವಾಸಿ. ಆದರೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿಲ್ಲ. ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಉಚಿತವಾಗಿ ಕಾರ್ಯಾಗಾರ ಏರ್ಪಡಿಸಲಾಗಿದೆ. ತಾಲ್ಲೂಕಿನ ಎಲ್ಲ ಪದವೀಧರ ನಿರುದ್ಯೋಗಿ ಯುವಕರು ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು. ಬಳಗದ ಅಧ್ಯಕ್ಷ ಬುಳುಸಾಗರದ ಬಾಬು, ಜಯ್ಯಣ್ಣ, ಸನಾವುಲ್ಲಾ, ಹರೀಶ್, ಬಸವಾಪುರ ರಂಗನಾಥ ನಾಯಕ, ಯೋಗರಾಜ್, ಸಚ್ಚಿನ್, ಅಣ್ಣಪ್ಪ, ಮೌನೇಶ್, ಸತೀಶ್, ಗೋವಿಂದ ರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT