ADVERTISEMENT

ಗಣೇಶೋತ್ಸವದ ಪೆಂಡಾಲ್‌ ಕುಸಿತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 13:12 IST
Last Updated 5 ಸೆಪ್ಟೆಂಬರ್ 2019, 13:12 IST
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ರಚಿಸಿರುವ ಧರ್ಮಸ್ಥಳ ದೇವಾಲಯ ಮಾದರಿಯ ಗಣಪತಿ ಪೆಂಡಾಲ್ ಗುರುವಾರ ಕುಸಿದಿರುವುದು
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ರಚಿಸಿರುವ ಧರ್ಮಸ್ಥಳ ದೇವಾಲಯ ಮಾದರಿಯ ಗಣಪತಿ ಪೆಂಡಾಲ್ ಗುರುವಾರ ಕುಸಿದಿರುವುದು   

ದಾವಣಗೆರೆ: ನಗರದ ಹೈಸ್ಕೂಲ್‌ ಮೈದಾನದಲ್ಲಿ ಗಣೇಶೋತ್ಸವ ಪ್ರಯುಕ್ತ ಹಾಕಲಾಗಿದ್ದ ಪೆಂಡಾಲ್‌ ಗುರುವಾರ ಕುಸಿದು ಬಿದ್ದಿದೆ.

15 ಅಡಿ ಎತ್ತರ ಗಣೇಶ ಮೂರ್ತಿಯನ್ನು ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಈ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಲಾಗಿತ್ತು. 180 ಅಡಿ ಅಗಲ ಹಾಗೂ 130 ಅಡಿ ಉದ್ದದಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯ ಪೆಂಡಾಲ್ ಇದಾಗಿತ್ತು.

ಮಳೆ, ಗಾಳಿಯಿಂದಾಗಿ ಪೆಂಡಾಲ್‌ನ ಒಂದು ಬದಿ ಕುಸಿದಿದ್ದು, ಉಳಿದ ಬದಿಯೂ ಕುಸಿಯುವ ಸ್ಥಿತಿಯಲ್ಲಿತ್ತು. ಪೆಂಡಾಲ್‌ ಕುಸಿಯುತ್ತಿದ್ದುದನ್ನು ಕಂಡು ಒಳಗಿದ್ದವರು ಹೊರಗೆ ಬಂದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

ADVERTISEMENT

‘ಎರಡು ದಿನಗಳಿಂದ ನಗರದಲ್ಲಿ ಉತ್ತಮ ಮಳೆಯಾಗುತ್ತಿದೆ. ಗುರುವಾರವೂ ಮಳೆ, ಗಾಳಿ ಬೀಸಿದ ಕಾರಣ ಪೆಂಡಾಲ್‌ ಬಿದ್ದಿದೆ. ಇದನ್ನು ದುರಸ್ತಿ ಮಾಡುತ್ತೇವೆ’ ಎಂದು ಸಮಿತಿಯವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.