ADVERTISEMENT

ಹಾಲುಮತ ಸಮಾಜದವರಿಂದ ಪ್ರತಿಮೆ ತೆರವು; ಮುಂದುವರಿದ ಧರಣಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:27 IST
Last Updated 8 ಮಾರ್ಚ್ 2024, 16:27 IST
ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಹಾಲುಮತ ಸಮಾಜಕ್ಕೆ ಸಂಬಂಧಿಸಿದ ಪ್ರತಿಮೆ, ನಾಮಫಲಕಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದ್ದಾರೆ
ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಹಾಲುಮತ ಸಮಾಜಕ್ಕೆ ಸಂಬಂಧಿಸಿದ ಪ್ರತಿಮೆ, ನಾಮಫಲಕಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದ್ದಾರೆ   

ಕಡರನಾಯ್ಕನಹಳ್ಳಿ: ಭಾನುವಳ್ಳಿಯಲ್ಲಿ ಹಾಲುಮತ ಸಮಾಜಕ್ಕೆ ಸಂಬಂಧಿಸಿದ ಕನಕದಾಸರ ನಾಮಫಲಕ, ಸಂಗೊಳ್ಳಿರಾಯಣ್ಣ ಪ್ರತಿಮೆಗಳನ್ನು ಹಾಲುಮತ ಸಮಾಜದವರು ಸ್ವಯಂ ಪ್ರೇರಿತರಾಗಿ ತೆರವು ಮಾಡಿದ್ದು, ಘಟನೆ ಹೊಸ ತಿರುವು ಪಡೆದುಕೊಂಡಿದೆ.

‘ಉಳಿದ ಅನಧಿಕೃತವಾಗಿ ನಿರ್ಮಿಸಿದ ಮಹಾದ್ವಾರ, ನಾಮಫಲಕಗಳನ್ನು ತೆರವುಗೊಳಿಸಲು ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ನಾವು ಅನಧಿಕೃತವಾಗಿ ನಿರ್ಮಿಸಿದ ಪ್ರತಿಮೆ, ನಾಮಫಲಕಗಳನ್ನು ತೆರೆವುಗೊಳಿಸಿದ್ದೇವೆ’ ಎಂದು ಹಾಲುಮತ ಸಮಾಜದವರು ತಿಳಿಸಿದ್ದಾರೆ.

‘ಗ್ರಾಮದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಮಹಾದ್ವಾರ ಮತ್ತು ನಾಮಫಲಕಗಳನ್ನು ತೆರವುಗೊಳಿಸುವವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ’ ಎಂದು ಧರಣಿ ನಿರತರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಹೆಚ್ಚುವರಿ ಎಸ್‌ಪಿ ವಿಜಯ್‌ಕುಮಾರ್ ಸಂತೋಷ್, ಗ್ರಾಮಾಂತರ ಸಿಪಿಐ ಪ್ರಶಾಂತ್ ಸಗರಿ, ಮಲೇಬೆನ್ನೂರು ಪಿಎಸ್‌ಐ ಪ್ರಭು ಡಿ ಸ್ಥಳ ವೀಕ್ಷಣೆ ನಡೆಸಿದರು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಹಾಲುಮತ ಸಮಾಜಕ್ಕೆ ಸಂಬಂಧಿಸಿದ ಪ್ರತಿಮೆ ನಾಮಫಲಕಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.