ಸಾಸ್ವೆಹಳ್ಳಿ: ಇಲ್ಲಿನ ಕೋಟೆ ಆಂಜನೇಯಸ್ವಾಮಿ ಮುಳ್ಳು ಗದ್ದುಗೆ ಉತ್ಸವ ಭಾನುವಾರ ಅಪಾರದ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಟ್ರ್ಯಾಕ್ಟರ್‌ನಲ್ಲಿ ಸಹ್ಯಾದ್ರಿ ತಪ್ಪಲಿನಿಂದ ಕಡಿದು ತಂದ ಕವಳೆ ಮುಳ್ಳನ್ನು ಚೌಕಾಕಾರದಲ್ಲಿ ಮುಳ್ಳಿನ ರಾಶಿ ಹಾಕಲಾಯಿತು. ಆಂಜನೇಯಸ್ವಾಮಿಯ ಕುದುರೆ ಸವಾರಿ, ಗ್ರಾಮ ದೇವತೆ ಗಡಿ ಪೂಜೆ ನಡೆಯಿತು. ಬಳಿಕ ಜಾನಪದ ಕಲಾಮೇಳಗಳೊಂದಿಗೆ ಸ್ವಾಮಿಯ ಹೊಳೆಪೂಜೆ ನಡೆಯಿತು.
ಸ್ವಾಮಿಯ ಗಣ ಮಗ ದೇವರು ಮೈದುಂಬಿ ಆರ್ಭಟಿಸಿದಾಗ ಭಕ್ತರು ದೇವರೊಂದಿಗೆ ಮುಳ್ಳು ಗದ್ದಿಗೆಯ ಮೇಲೆ ಜೀಕು ಹೊಡೆಯುತ್ತಾ, ಮುಳ್ಳು ತುಳಿದರು.
ಸುತ್ತಲಿನ ಗ್ರಾಮಗಳ ಭಕ್ತರು ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಭೂತಪ್ಪಗಳಿಗೆ ಹಾಲು, ಬಾಳೆಹಣ್ಣು, ಅನ್ನದ ರಾಶಿ ಹಾಕಿ ಭೂತಾರಾಧನೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.