ತ್ಯಾವಣಿಗೆ: ಹೋಬಳಿಯಾದ್ಯಂತ ಬುಧವಾರ ರಾತ್ರಿಯಿಡಿ ಹಾಗೂ ಗುರುವಾರ ಬೆಳಿಗ್ಗೆ 11 ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಸಮೀಪದ ಕಶೆಟ್ಟಿಹಳ್ಳಿ- ಕತ್ತಲಗೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ.
ಕಶೆಟ್ಟಿಹಳ್ಳಿ ಗ್ರಾಮದ ಜನರು ಕರಡಿ ಹಳ್ಳದ ಸೇತುವೆ ಕೆಳಭಾಗದಲ್ಲಿರುವುದರಿಂದ ಪ್ರತಿ ಬಾರಿ ಮಳೆಗೆ ಸಾರ್ವಜನಿಕರು ಆಸ್ಪತ್ರೆ, ಮಕ್ಕಳು ಶಾಲೆಗೆ ಹೋಗಲು, ರೈತರು ಗ್ರಾಮ ಪಂಚಾಯಿತಿ ಮತ್ತು ತೋಟ, ಗದ್ದೆಗೆ ತೆರಳು ಬಹಳಗೆ ತೆರಳಲು ಬಹಳ ತೊಂದರೆಯಾಗುತ್ತಿದೆ.
ಶಾಸಕರು, ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮದ ಮುಖಂಡರಾದ ಜಯಪ್ಪ ಗೌಡ್ರು. ಟಿ.ರಾಮಪ್ಪ. ಎಂ.ಆರ್. ತಿಪ್ಪೇಶ್, ಸುರೇಶ್, ಕೆಂಚಪ್ಪ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.