ADVERTISEMENT

ಹೊನ್ನಾಳಿ | ಕರಡಿ ಪ್ರತ್ಯಕ್ಷ; ಆತಂಕದಲ್ಲಿ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 13:33 IST
Last Updated 22 ಜೂನ್ 2025, 13:33 IST
ಹೊನ್ನಾಳಿ ಪ್ರವಾಸಿ ಮಂದಿರದ ರಸ್ತೆಯಲ್ಲಿ ಕರಡಿ ಕಾಣಿಸಿಕೊಂಡಿದೆ
ಹೊನ್ನಾಳಿ ಪ್ರವಾಸಿ ಮಂದಿರದ ರಸ್ತೆಯಲ್ಲಿ ಕರಡಿ ಕಾಣಿಸಿಕೊಂಡಿದೆ   

ಹೊನ್ನಾಳಿ: ಪಟ್ಟಣದ ಪ್ರವಾಸಿಮಂದಿರದ ರಸ್ತೆಯಲ್ಲಿ ಈಚೆಗೆ ಕರಡಿಯೊಂದು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. 

ತಾಲ್ಲೂಕಿನ ದಿಡಗೂರು ಗ್ರಾಮದ ಮೂಲಕ ರಾತ್ರಿ ವೇಳೆ ಹೊನ್ನಾಳಿ ಪಟ್ಟಣದ ಟಿ.ಬಿ.ವೃತ್ತಕ್ಕೆ ಬಂದಿದೆ. ಪ್ರವಾಸಿ ಮಂದಿರ, ಗುಂಡು ತೋಪು, ಕೋಟೆ ಹಾಗೂ ಬಾಲರಾಜ್ ಘಾಟ್ ಬಳಿ ಈ ಕರಡಿ ಸುತ್ತಾಡಿರುವುದು ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಟೊ ಚಾಲಕರೊಬ್ಬರು ಕರಡಿ ಓಡಿ ಹೋಗುತ್ತಿರುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಕೋಟೆ ಬಳಿ ಬೆಳಗಿನ ಜಾವ ಕರಡಿಯನ್ನು ನೋಡಿದ ವ್ಯಕ್ತಿಯೊಬ್ಬ ಭಯದಿಂದ ಓಡಿ ಹೋದ ದೃಶ್ಯವೂ ಮೊಬೈಲ್‌ನಲ್ಲಿ ಸೆರೆಯಾಗಿದೆ. 

ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಕಿಶೋರ್ ಅವರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಆದರೂ, ಕರಡಿಯ ಸುಳಿವು ಸಿಕ್ಕಿಲ್ಲ.  ನಾಗರಿಕರು ಕರಡಿ ಎಲ್ಲಿ ಅಡಗಿ ಕುಳಿತಿದೆಯೋ ಎಂಬ ಆತಂಕದಲ್ಲಿ ಇದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.