ಹೊನ್ನಾಳಿ: ತಾಲ್ಲೂಕಿನ ಹಳೇದೇವರಹೊನ್ನಾಳಿಯಲ್ಲಿ ರಾಮಾನುಜಾಚಾರ್ಯರ 1008ನೇ ವರ್ಷದ ಜಯಂತ್ಯುತ್ಸವದ ನಿಮಿತ್ತ ಭಾನುವಾರ ರಥೋತ್ಸವ ನಡೆಯಿತು.
ಸಾಮೂಹಿಕ ವಿವಾಹ ಹಾಗೂ ಉಪನಯನ ಮತ್ತು ಮಠದ 9ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಿದವು.
ಶನಿವಾರ ರಾತ್ರಿ ಮಠದಲ್ಲಿ ಪುಣ್ಯಾಹ, ಪಂಚಾಮೃತ ಅಭಿಷೇಕ, ವಿವಿಧ ಹೂವಿನ ಅಲಂಕಾರ ಗಂಗಾಪೂಜೆ, ಧ್ವಜಾರೋಹಣ, ರಥಕ್ಕೆ ಕಂಕಣಧಾರಣೆ, ಕಳಶಾರೋಹಣ ನಡೆದವು
ಭಾನುವಾರ ಸುಪ್ರಭಾತ ಸೇವೆ, ಸಾಮೂಹಿಕ ಉಪನಯನ, ಅಷ್ಠಾವಧಾನ ಸೇವೆ ನಡೆಯಿತು. ಬಳಿಕ ವಿವಿಧ ಹೂವುಗಳಿಂದ ಆಲಂಕೃತಗೊಂಡ ರಥವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ರಥೋತ್ಸವ ಬಳಿಕ ಉಯ್ಯಾಲೆ ಸೇವೆ ನಡೆಯಿತು.
ಮಠದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಸ್.ಕೆ. ಗೋಪಾಲಯ್ಯ, ವೈಷ್ಣವ ಸಮಾಜದ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷ ಎಸ್. ವೆಂಕಟರಾವ್, ಅಧ್ಯಕ್ಷ ಎಸ್.ಕೆ. ಗೋಪಾಲಯ್ಯ, ಉಪಾಧ್ಯಕ್ಷ ಆರ್. ರಂಗನಾಥ್, ಸದಸ್ಯರಾದ ಕೆ.ರಾಜಕುಮಾರ್, ಖಜಾಂಚಿ ಎನ್. ರಂಗನಾಥ್, ನಿರ್ದೇಶಕರಾದ ಎಸ್. ಶೇಷಯ್ಯ, ಎಸ್.ಎಂ. ವೆಂಕಟೇಶ್, ಎಸ್.ಕೆ. ಹನುಮಂತಯ್ಯ, ಆರ್.ಪಿ.ರವಿಕುಮಾರ್, ಎ. ಪ್ರಕಾಶ್, ಕೇಶವಮೂರ್ತಿ, ಗೋಪಾಲಕೃಷ್ಣ, ಆಶ್ವತ್ ನಾರಾಯಣ ಸೇರಿದಂತೆ ಗ್ರಾಮದ ಮುಖಂಡರು, ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.