ಜಗಳೂರು: ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿ.ವಿ.ವೀರೇಶ್ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಅಧಿಕಾರ ಹಂಚಿಕೆ ಒಡಂಬಡಿಕೆ ಅನ್ವಯ, ಅಧ್ಯಕ್ಷೆ ರೇಣುಕಮ್ಮ ಗುರುಮೂರ್ತಿ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಪಲ್ಲಾಗಟ್ಟೆ ಗ್ರಾಮದ ಸದಸ್ಯ ಬಿ.ವಿ.ವೀರೇಶ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಬಿ.ವಿ. ವೀರೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಶ್ವೇತಾ ಘೋಷಿಸಿದರು.
ಒಟ್ಟು 22 ಸದಸ್ಯರ ಪೈಕಿ 21 ಸದಸ್ಯರು ಸಭೆಗೆ ಹಾಜರಾಗಿದ್ದರು. ಮಾಜಿ ಶಾಸಕ ಎಚ್.ಪಿ.ರಾಜೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿರೂಪಾಕ್ಷಪ್ಪ, ಸದಸ್ಯರಾದ ಶೇಖರಪ್ಪ, ರೇಣುಕಮ್ಮ, ಯಲ್ಲಮ್ಮ, ಬಸವರಾಜ್, ರತ್ನಮ್ಮ, ನಾಗಪ್ಪ, ದಿವ್ಯಾ ಸತೀಶ್, ಎಚ್.ರವೀಜಾತಾಜ್, ಗುರುಸ್ವಾಮಿ, ನಾಗರಾಜ್, ಹೊನ್ನಮ್ಮ, ಗಾಯಿತ್ರಮ್ಮ, ಚಂದ್ರಮ್ಮ ಪ್ರಕಾಶ್, ಬಸವರಾಜ್, ಶಿವಗಂಗಾ, ಮಂಜಮ್ಮ, ಪ್ರಕಾಶ್, ಮುಖಂಡರಾದ ಗುರುಮೂರ್ತಿ, ಗೋಡೆ ಪ್ರಕಾಶ್, ಹನುಮಂತಪ್ಪ ಅವರು ವೀರೇಶ್ ಅವರನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.