ADVERTISEMENT

‘ವಿಜ್ಞಾನ ಪರಿಷತ್ತಿನ ಬೈಲಾಗೆ ತಿದ್ದುಪಡಿಗೆ ಆದ್ಯತೆ’

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಚುನಾವಣೆ 23ಕ್ಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST

ದಾವಣಗೆರೆ: ‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಚುನಾವಣೆ ಫೆ. 23ರಂದು ನಡೆಯಲಿದೆ. ಚುನಾವಣೆಗೆ ಬೆಂಗಳೂರು ವಿಭಾಗದಿಂದ ಸ್ಪರ್ಧಿಸುತ್ತಿದ್ದು, ಪರಿಷತ್ತಿನ ಬೈಲಾಗೆ ತಿದ್ದುಪಡಿ ತರಲು ನಮ್ಮ ತಂಡ ಆದ್ಯತೆ ನೀಡಲಿದೆ’ ಎಂದು ಅಭ್ಯರ್ಥಿ ಎಂ. ಗುರುಸಿದ್ಧಸ್ವಾಮಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಷತ್ತು ಇಂದು ಮೂಲ ಆಶಯ ಕಳೆದುಕೊಂಡಿದೆ. ಈಗಿನ ಬೈಲಾದಲ್ಲಿ ಒಂದು ಮನೆಯ, ಒಂದು ಊರಿನ ಎಲ್ಲರೂಮತದಾರರಾಗಲು ಅವಕಾಶ ಇದೆ. ಈಗ ಒಂದು ಶಾಲೆಯಲ್ಲೇ 290 ಮತಗಳು ಇವೆ. ಹೀಗಾಗಿ ಬೈಲಾಗೆ ತಿದ್ದುಪಡಿ ಅಗತ್ಯವಿದೆ. ನಮ್ಮ ಸಮಾನ ಮನಸ್ಕರ ತಂಡ ಚುನಾವಣೆಯಲ್ಲಿ ಆಯ್ಕೆಯಾದರೆ ಇದಕ್ಕೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

‘ಪ್ರತಿ ಜಿಲ್ಲೆಗೂ ಪ್ರಾತಿನಿಧ್ಯ ಸಿಗಬೇಕು ಎಂಬುದು ನಮ್ಮ ಆಶಯ. ಸಮಾನ ಮನಸ್ಕರ ತಂಡದಲ್ಲಿ ಸ್ಪರ್ಧಿಸಿರುವ 6 ಜನರೂ ಒಂದೊಂದು ಜಿಲ್ಲೆಯವರು. ರಾಜ್ಯದಲ್ಲಿ ಒಟ್ಟು 4 ವಿಭಾಗಗಳಿದ್ದು, 9800 ಜನ ಮತದಾರರು ಇದ್ದಾರೆ. ಬೆಂಗಳೂರು ವಿಭಾಗ 10 ಜಿಲ್ಲೆ ಒಳಗೊಂಡಿದ್ದು, 2203 ಮತದಾರರು ಇದ್ದಾರೆ. ದಾವಣಗೆರೆಯಲ್ಲಿ 148 ಮತದಾರರು ಇದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ಪರಿಷತ್ತು ಸ್ವಾಯತ್ತ ಸಂಸ್ಥೆಯಾದರೂ ಸ್ವಾಯತ್ತತೆ ಕಾಪಾಡಲು ವಿಫಲವಾಗಿದೆ. ಸ್ವಾಯತ್ತತೆ ತರಲು ಈಗಿನ ತಂಡದವರು ಗಮನಹರಿಸುತ್ತಿಲ್ಲ ಎಂದು ಆರೋಪಿಸಿದ ಅವರು, ‘ಪವಾಡ ಬಯಲು, ಗ್ರಹಣ ವೀಕ್ಷಣೆ ಸೇರಿ ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಹಲವು ಕಾರ್ಯಕ್ರಮ ತಂಡದಿಂದ ಆಯೋಜಿಸಲಾಗಿದೆ. ನಮ್ಮ ತಂಡಕ್ಕೆದಾನಿ ಸದಸ್ಯರು ಮತ ನೀಡಬೇಕು’ ಎಂದು ಮನವಿ ಮಾಡಿದರು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಿ. ರಂಗಸ್ವಾಮಿ, ‘ಗುರುಸಿದ್ಧಸ್ವಾಮಿ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಅವರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಆವರಗೆರೆ ರುದ್ರಮುನಿ, ಸಿದ್ದೇಶ್‌ ಕೆ., ಎಚ್‌.ಕೆ. ವಿವೇಕಾನಂದಸ್ವಾಮಿ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.