ADVERTISEMENT

ಕೆರೆ ತುಂಬಿಸುವ ಯೋಜನೆ: ಸ್ಥಳ ಪರಿಶೀಲಿಸಿದ ಸಿರಿಗೆರೆ ಶ್ರೀ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 10:11 IST
Last Updated 14 ಮಾರ್ಚ್ 2020, 10:11 IST
ಭರಮಸಾಗರ ದೊಡ್ಡಕೆರೆಗೆ ನೀರು ಹರಿಸುವ ಯೋಜನೆಯ ನೀಲಿ ನಕ್ಷ ಯ ಪ್ರಕಾರ ಸ್ಥಳವನ್ನು ಶುಕ್ರವಾರ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಪರಿಶೀಲಿಸಿದರು
ಭರಮಸಾಗರ ದೊಡ್ಡಕೆರೆಗೆ ನೀರು ಹರಿಸುವ ಯೋಜನೆಯ ನೀಲಿ ನಕ್ಷ ಯ ಪ್ರಕಾರ ಸ್ಥಳವನ್ನು ಶುಕ್ರವಾರ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಪರಿಶೀಲಿಸಿದರು   

ಭರಮಸಾಗರ: ಕೆರೆ ಪೈಪ್‌ಲೈನ್ ಕಾಮಗಾರಿ ಮುಗಿದ ಮೇಲೆ ಭರಮಸಾಗರ ಕೆರೆ ತುಂಬಲು ಕೇವಲ 23 ದಿನ ಸಾಕು ಎಂದು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ದೊಡ್ಡಕೆರೆ ಏರಿಯಲ್ಲಿ ಶುಕ್ರವಾರ ಕೆರೆನೀರು ಹರಿಸುವ ಯೋಜನೆಯ ಸ್ಥಳ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡರೆ ಕೆರೆ ಬೇಗ ತುಂಬುತ್ತದೆ ಎಂದು ಗುತ್ತಿಗೆ ದಾರರು ತಿಳಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಭರಮಸಾಗರ ಕೆರೆಗೆ ನೀರು ಬರುವ ನಿರೀಕ್ಷೆಯಿದೆ.
ದೊಡ್ಡಕೆರೆ ಜಾಕ್‌ವೆಲ್ ಸ್ಥಳವನ್ನು ಅಧಿಕಾರಿಗಳು ನಕ್ಷೆಯೊಂದಿಗೆ ಸ್ವಾಮೀಜಿಗೆ ವಿವರಿಸಿದರು.

ADVERTISEMENT

ಮಲಶೆಟ್ಟಿ ಹಳ್ಳಿ ಕೆರೆ, ಜಾಕ್‌ವೆಲ್ ಪರಿಶೀಲನೆ:

ಭರಮಸಾಗರದಿಂದ ಮಲಶೆಟ್ಟಿಹಳ್ಳಿಗೆ ತೆರಳಿ ನೂತನವಾಗಿ ನಿರ್ಮಿಸಿರುವ ಕೆರೆಯನ್ನು ಪರಿಶೀಲಿಸಿದರು. ಸಮೀಪದ ಒಂದು ಎಕರೆ ಜಾಗದಲ್ಲಿ ಗೋಕಟ್ಟೆ ನಿರ್ಮಿಸಬೇಕು. ಜಾಕ್‌ವೆಲ್‌ಗೆ ಬರುವ ನೀರು ಹಾಗೂ ಹೊರ ಹೋಗುವ ನೀರು ಗೊತ್ತಾಗುವ ರೀತಿ ಪೈಪ್ ಅಳವಡಿಸಬೇಕು ಎಂದು ಆಭಾಗದ ರೈತರು ಮನವಿ ಮಾಡಿದರು. ಈ ಬಗ್ಗೆ ಮಲ್ಲಶೆಟ್ಟಿ ಹಳ್ಳಿಯ ಕೆರೆ, ಜಾಕ್‌ವೆಲ್ ಇತರೆ ಕೆಲಸಗಳಿಗೆ ₹ 5 ಕೋಟಿ ನೀಡಲಾಗುವುದು. ಅದರಲ್ಲಿ ಗೋಕಟ್ಟೆಗೂ ಹಣ ನೀಡುವುದಾಗಿ ನೀರಾವರಿ ನಿಗಮದ ನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆ ತಿಳಿಸಿದರು.

ಹರಿಹರದ ಹಲಸಬಾಳು ಗ್ರಾಮದ ತುಂಗಭದ್ರಾ ನದಿಯ ಬಳಿಯ ಜಾಕ್‌ವೆಲ್ ಬಳಿ ನಡೆಯುತ್ತಿರುವ ಕಾಮಗಾರಿ,ಜಗಳೂರು ಕೆರೆಗೆ ನೀರು ಹರಿಸುವ ಜಾಕ್‌ವೆಲ್ ಪರಿಶೀಲನೆ ನಡೆಸಿದರು. ಪೈಪ್‌ಲೈನ್ ಉಚ್ಚಂಗಿದುರ್ಗದವರೆಗೂ ಇರಬೇಕು. ನಡುವೆ ಯಾವುದೇ ವಾಲ್, ಬೈಪಾಸ್ ಮಾಡಬಾರದು ಎಂದು ಸ್ವಾಮೀಜಿ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.