ADVERTISEMENT

ಲಯನ್ಸ್‌ ಕ್ಲಬ್ ಸುವರ್ಣ ಮಹೋತ್ಸವ ಜೂನ್ 2ರಂದು

​ಪ್ರಜಾವಾಣಿ ವಾರ್ತೆ
Published 31 ಮೇ 2019, 13:57 IST
Last Updated 31 ಮೇ 2019, 13:57 IST

ದಾವಣಗೆರೆ: ದಿ ಇಂಟರ್‌ ನ್ಯಾಷನಲ್ ಅಸೋಸಿಯೇಷನ್‌ ಆಫ್‌ ಲಯನ್ಸ್‌ ಕ್ಲಬ್‌ ಹಾಗೂ ದಾವಣಗೆರೆ ಲಯನ್ಸ್‌ ಕ್ಲಬ್‌ವತಿಯಿಂದ ದಾವಣಗೆರೆ ಲಯನ್ಸ್ ಕ್ಲಬ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮ ಜೂನ್ 2ರಂದು ಬಂಟರ ಸಮುದಾಯ ಭವನದಲ್ಲಿ ನಡೆಯಲಿದೆ.

ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎಸ್‌. ನಾಗಪ್ರಕಾಶ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜೂನ್‌ 2ರಂದು ಬೆಳಿಗ್ಗೆ 11ಕ್ಕೆ ಸುವರ್ಣ ಮಹೋತ್ಸವ ಸಭಾಭವನದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವದ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ದೇವರಾಜ ಅರಸು ಬಡಾವಣೆಯ ಲಯನ್ಸ್ ಭವನದಲ್ಲಿ ನಡೆಯಲಿದೆ’ ಎಂದು ಹೇಳಿದರು.

‘ಲಯನ್ಸ್ ಸಂಸ್ಥೆಯ ಅಂತರರಾಷ್ಟ್ರೀಯ ನಿರ್ದೇಶಕ ವಿ. ವಿ. ಕೃಷ್ಣ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಡಿಸ್ಟ್ರಿಕ್ಟ್ 317 ಸಿ ಗವರ್ನರ್ ತಲ್ಲೂರು ಶಿವರಾಮ್‌ ಶೆಟ್ಟಿ, ಡಾ. ಬಿ.ಎಸ್‌. ನಾಗಪ್ರಕಾಶ್, ಎ.ಬಿ. ಪ್ರತಾಪ್‌ ಪಾಲ್ಗೊಳ್ಳುವರು. ದಾವಣಗೆರೆ ಲಯನ್ಸ್‌ ಟ್ರಸ್ಟ್ ಅಧ್ಯಕ್ಷ ಜಿ.ನಾಗನೂರ್ ಅಧ್ಯಕ್ಷತೆ ವಹಿಸುವರು’ ಎಂದು ಹೇಳಿದರು.

ADVERTISEMENT

‘ಸಂಜೆ 6ಕ್ಕೆ ಬಂಟರ ಸಮುದಾಯ ಭವನದಲ್ಲಿ ನಡೆಯುವ ಸುವರ್ಣ ಮಹೋತ್ಸವ ಸಮಾರಂಭವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದು, ಮಾಜಿ ಶಾಸಕ ವೈ.ಎಸ್‌.ವಿ ದತ್ತ ಪ್ರಾಸ್ತಾವಿಕ ಭಾಷಣ ಮಾಡುವರು. ವಿ.ವಿ. ಕೃಷ್ಣ ರೆಡ್ಡಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸುಗಮ ಸಂಗೀತ ಗಂಗಾದ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ, ತಲ್ಲೂರು ಶಿವರಾಮ್ ಶೆಟ್ಟಿ, ಜಿ.ನಾಗನೂರ್, ಎ.ಬಿ. ಪ್ರತಾಪ್‌ ಪಾಲ್ಗೊಳ್ಳುವರು’ ಎಂದು ಹೇಳಿದರು.

‘ನನ್ನ 70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಿಯು ಕಾಲೇಜು ನಿರ್ಮಾಣಕ್ಕೆ ₹10 ಲಕ್ಷ ನೀಡಿದ್ದು, ಅಂದು ಕಾಲೇಜಿನ ಶಂಕುಸ್ಥಾಪನೆ ನೆರವೇರಿಸಲಾಗುವುದು. ರೋಟರಿ ಸಂಸ್ಥೆಯು 7ಸಾವಿರಕ್ಕೂ ಹೆಚ್ಚು ಕಣ್ಣಿನ ತಪಾಸಣಾ ಶಿಬಿರ ನಡೆಸಿದ್ದು, ಹಲವು ಜನಪರ ಕಾರ್ಯಕ್ರಮಗಳನ್ನು ಮಾಡಿದೆ. ಸಂಸ್ಥೆಯಲ್ಲಿ 25 ವರ್ಷ ಸದಸ್ಯತ್ವ ಪಡೆದವರು ಹಾಗೂ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.

ಸುವರ್ಣ ಮಹೋತ್ಸವ ಸಮಿತಿಯ ಜಿ.ನಾಗನೂರ್, ಎ.ಬಿ. ಪ್ರತಾಪ್‌, ಎನ್‌.ವಿ. ಭಂಡಿವಾಡ್‌, ಎನ್‌.ಸಿ. ಬಸವರಾಜ್, ಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.