ADVERTISEMENT

ನ್ಯಾಮತಿ | ಸಾಲಗಾರರ ಕಿರುಕುಳ: ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 7:15 IST
Last Updated 7 ಆಗಸ್ಟ್ 2025, 7:15 IST
ಯಶವಂತನಾಯ್ಕ
ಯಶವಂತನಾಯ್ಕ   

ನ್ಯಾಮತಿ: ತಾಲ್ಲೂಕಿನ ಮಾಚಿಗೊಂಡನಹಳ್ಳಿ ಗ್ರಾಮದ ಯುವಕನೊಬ್ಬ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. 

ಮಾಚಿಗೊಂಡನಹಳ್ಳಿ ಗ್ರಾಮದ ರೂಪ್ಲಾನಾಯ್ಕ ಅವರ ಪುತ್ರ ಯಶವಂತನಾಯ್ಕ (24) ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. 

‘ಯಶವಂತನಾಯ್ಕ ಶಿವಮೊಗ್ಗ ತಾಲ್ಲೂಕಿನ ನಾರಾಯಣಪುರದ ಸುನಿಲ್‌ನಾಯ್ಕ ಬಳಿ ಬೈಕ್ ಅಡವಿಟ್ಟು ₹40,000 ಸಾಲ ಪಡೆದಿದ್ದ. ಶಿವಮೊಗ್ಗದ ಖಾಸಗಿ ಫೈನಾನ್ಸ್‌ವೊಂದರಲ್ಲಿ ₹ 5 ಲಕ್ಷ ಗೃಹಸಾಲ ಪಡೆದಿದ್ದ. ಸಾಲದ ಕಂತುಗಳನ್ನು ಸರಿಯಾಗಿ ಕಟ್ಟಲು ಆಗಿರಲಿಲ್ಲ. ಕಂತು ಕಟ್ಟದಿದ್ದರೆ ಮನೆ ಜಪ್ತಿ ಮಾಡುತ್ತೇವೆ ಎಂದು ಫೈನಾನ್ಸ್ ಸಂಸ್ಥೆಯ ಸಂದೀಪ್, ವಿನಯ್, ಲೋಹಿತ್, ಗಣೇಶ ಅವರು ಕಿರುಕುಳ ನೀಡುತ್ತಿದ್ದರು. ಕೈಸಾಲ ನೀಡಿದ್ದ ಸುನಿಲ್‌ನಾಯ್ಕ ಕೂಡಾ ಮನೆ ಬಳಿ ಬಂದು ಸಾಲ ಕಟ್ಟುವಂತೆ ಗಲಾಟೆ ಮಾಡಿ ಬೈದಿದ್ದ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಮೃತನ ತಾಯಿ ನ್ಯಾಮತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದರಿಂದ

ADVERTISEMENT

ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಹೊಳೆಬಸಪ್ಪ ಹೋಳಿ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.