ಗಡೆಕಟ್ಟೆ (ನ್ಯಾಮತಿ): ಗ್ರಾಮದಲ್ಲಿ ಮಾರ್ಚ್ 18, 19ರಂದು ನಡೆಯಲಿರುವ ಮಾರಿಕಾಂಬಾ ದೇವಿ ಜಾತ್ರೆಯನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಬೇಕು ಎಂದು ನ್ಯಾಮತಿ ಪೊಲೀಸ್ ಠಾಣೆಯ ಎಎಸ್‌ಐ ಮಲ್ಲೇಶಪ್ಪ ತಿಳಿಸಿದರು.
ಗ್ರಾಮದಲ್ಲಿ ಜಾತ್ರೆ ಸಂಬಂಧ ಶನಿವಾರ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು.
ಹೊರಗಡೆಯಿಂದ ಬರುವ ವಾಹನಗಳಿಗೆ ಗ್ರಾಮದ ಹೊರಭಾಗದ ಜಮೀನುಗಳಲ್ಲಿ ನಿಲುಗಡೆ ವ್ಯವಸ್ಥೆ ಮಾಡಬೇಕು. ಅಹಿತಕರ ಘಟನೆಗಳಿಗೆ ಗ್ರಾಮಸ್ಥರು ಆಸ್ಪದ ಕೊಡಬಾರದು ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ವಿ. ನಿರಂಜನ, ಉಪಾಧ್ಯಕ್ಷ ಡಿ.ಎ. ಹನುಮಂತಪ್ಪ, ಸದಸ್ಯರಾದ ಕೆ.ಜಿ. ಪರಮೇಶ, ಜೆ.ಕೆ.ಚಂದ್ರಪ್ಪ, ಎಂ.ಜಿ. ನಾಗರಾಜ, ಬಸವನಗೌಡ, ಜೆ.ಒ. ಹನುಮಂತಪ್ಪ, ಬಸವರಾಜ, ವೀರಭದ್ರ, ಗಜೇಂದ್ರಪ್ಪ, ಎಂ.ಜಿ. ಚನ್ನವೀರಪ್ಪ, ಜಿ.ಎ. ರುದ್ರಪ್ಪ, ಜೆ.ಎ. ಮಹೇಶ್ವರಪ್ಪ, ಧನಂಜಯ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.