ದಾವಣಗೆರೆ: ರಾಜ್ಯ ಸರ್ಕಾರದ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಕೆಲ ಸಚಿವರ ಸಾಧನೆ ತೃಪ್ತಿದಾಯಕವಾಗಿಲ್ಲ. ಇಂತಹ 8ಕ್ಕೂ ಅಧಿಕ ಅಸಮರ್ಥ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಚನ್ನಗಿರಿಯ ಕಾಂಗ್ರೆಸ್ ಶಾಸಕ ಬಸವರಾಜು ವಿ.ಶಿವಗಂಗಾ ಒತ್ತಾಯಿಸಿದರು.
‘ರಾಜ್ಯ ಸರ್ಕಾರ ಸಾಧನಾ ಸಮಾವೇಶ ಮಾಡಿದೆ. ಸರ್ಕಾರದ ವೇಗಕ್ಕೆ ಕೆಲ ಸಚಿವರು ಹೊಂದಿಕೊಂಡಿಲ್ಲ. ಅವರ ಸಾಧನೆಯ ಬಗ್ಗೆ ಜನರಲ್ಲಿ ಅತೃಪ್ತಿ ಇದೆ. ಎಲ್ಲ ಸಚಿವರ ಕಾರ್ಯವೈಖರಿ, ಸಾಧನೆಯನ್ನು ಪಕ್ಷದ ವರಿಷ್ಠರು ಪರಿಶೀಲಿಸಬೇಕು. ಕೆಲಸ ಮಾಡದೇ ಇರುವವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಐದಾರು ಬಾರಿ ಶಾಸಕರಾಗಿ ಆಯ್ಕೆಯಾದವರಿಗೂ ಸಚಿವರಾಗುವ ಅವಕಾಶ ಸಿಕ್ಕಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಕೆಲವರು ಸಚಿವರಾಗುತ್ತಲೇ ಬಂದಿದ್ದಾರೆ. ಸಚಿವ ಸಂಪುಟಕ್ಕೆ ಹೊಸಬರು ಸೇರ್ಪಡೆಯಾದರೆ ಸರ್ಕಾರದ ಕಾರ್ಯವೈಖರಿ ಬದಲಾಗುತ್ತದೆ. ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಅವರಿಗೆ ಸಚಿವ ಸ್ಥಾನ ಸಿಕ್ಕರೆ ಖುಷಿಪಡುತ್ತೇನೆ. ಅವಕಾಶ ಸಿಕ್ಕರೆ ನಾನೂ ಸಚಿವನಾಗಲು ಸಿದ್ಧ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಕಾಂತರಾಜ್ ಆಯೋಗ ನಡೆಸಿದ ಜಾತಿ ಗಣತಿಯಲ್ಲಿ ಲೋಪದೋಷ ಇವೆ. ಪರಿಶಿಷ್ಟ ಜಾತಿಯ ದತ್ತಾಂಶ ಸಂಗ್ರಹಕ್ಕೆ ನಡೆಸುತ್ತಿರುವ ಸಮೀಕ್ಷೆಯ ಮಾದರಿಯಲ್ಲಿ ಪಾರದರ್ಶಕ ಗಣತಿ ನಡೆಯಲಿಬಸವರಾಜು ವಿ.ಶಿವಗಂಗಾ ಶಾಸಕ ಚನ್ನಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.