ನ್ಯಾಮತಿ: ಸಾಗರ ತಾಲ್ಲೂಕು ಹೆಗ್ಗೋಡು ನೀನಾಸಂ ರಂಗಶಿಕ್ಷಣ ಕೇಂದ್ರಕ್ಕೆ 2025–26ನೇ ಸಾಲಿಗೆ ದಾವಣಗೆರೆ ಜಿಲ್ಲೆಯಿಂದ ಪಟ್ಟಣದ ಗುಡೆಮನೆ ಲೋಕೇಶ ಆಯ್ಕೆಯಾಗಿದ್ದಾರೆ.
ಲೋಕೇಶ ಅವರು ಸ್ನಾತಕೋತ್ತರ ಪದವಿಧರರಾಗಿದ್ದು, ಶಿವಮೊಗ್ಗದ ಹಲವು ರಂಗತಂಡಗಳಲ್ಲಿ ಕೆಲಸ ಮಾಡಿದ್ದು, ಈಗ ರಂಗ ತರಬೇತಿ ಪಡೆದು ಕಲಾ ಸೇವೆ ಮಾಡಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದರು. ಅವರು ಪಟ್ಟಣದ ಮಾರಿಗುಡಿ ಬೀದಿ ಜಗದೀಶ ಮತ್ತು ಕುಸುಮಾ ದಂಪತಿ ಪುತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.