ನ್ಯಾಮತಿ: ತಾಲ್ಲೂಕಿನ ಕುಂಕುವ ಗ್ರಾಮದ ಮುಸ್ಸೇನಾಳ್ ರಸ್ತೆಯಲ್ಲಿರುವ ತೋಟದ ಒಂಟಿ ಮನೆಯಲ್ಲಿ ಬುಧವಾರ ರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದೆ.
‘ಅಡಿಕೆ ತೋಟದ ಮನೆಯಲ್ಲಿ ವೃದ್ಧ ತಂದೆ–ತಾಯಿ ವಾಸವಿದ್ದು, ರಾತ್ರಿ ಸಮಯದಲ್ಲಿ ನಾಲ್ಕೈದು ಅಪರಿಚಿತರು ಮನೆಯ ಕಿಟಕಿ, ಬಾಗಿಲು ಬಡಿದಿದ್ದಾರೆ. ಬಾಗಿಲು ತೆಗೆಯದಿದ್ದಾಗ ಹಂಚುಗಳನ್ನು ತೆಗೆಯಲು ಯತ್ನಿಸಿದ್ದಾರೆ. ಅವರು ಎಚ್ಚರಗೊಂಡು ಗಾಬರಿಯಿಂದ ಕೂಗಿಕೊಂಡಾಗ ಕಳ್ಳರು ಪರಾರಿಯಾಗಿದ್ದಾರೆ’ ಎಂದು ಅವರ ಪುತ್ರ ನ್ಯಾಮತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.