ADVERTISEMENT

ಮಲೇಬೆನ್ನೂರು: ಭತ್ತದ ಗದ್ದೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 4:57 IST
Last Updated 7 ಅಕ್ಟೋಬರ್ 2021, 4:57 IST
ಮಲೇಬೆನ್ನೂರು ಸಮೀಪದ ಗುಳದಹಳ್ಳಿ ಹೊರವಲಯದ ಭದ್ರಾ ಅಚ್ಚುಕಟ್ಟಿನ ಭತ್ತದ ಗದ್ದೆಗಳಿಗೆ ಬುಧವಾರ ಮಳೆ ನೀರು ನುಗ್ಗಿ ಜಲಾವೃತವಾಗಿದೆ
ಮಲೇಬೆನ್ನೂರು ಸಮೀಪದ ಗುಳದಹಳ್ಳಿ ಹೊರವಲಯದ ಭದ್ರಾ ಅಚ್ಚುಕಟ್ಟಿನ ಭತ್ತದ ಗದ್ದೆಗಳಿಗೆ ಬುಧವಾರ ಮಳೆ ನೀರು ನುಗ್ಗಿ ಜಲಾವೃತವಾಗಿದೆ   

ಮಲೇಬೆನ್ನೂರು:ಪ್ರಸಕ್ತ ಹಸ್ತಾ ಮಳೆ ಆರ್ಭಟ ಮುಂದುವರಿದಿದ್ದು, ಹೋಬಳಿ ವ್ಯಾಪ್ತಿಯ ಗುಳದಹಳ್ಳಿ, ಸಂಕ್ಲೀಪುರ, ಆದಾಪುರ, ನಿಟ್ಟೂರು ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತವಾಗಿವೆ.

ಎರಡು ದಿನಗಳಿಂದ ಸಂಜೆಯ ಬಳಿಕ ಸಿಡಿಲು, ಗುಡುಗು, ಮಿಂಚಿನ ಆರ್ಭಟದೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದೆ.

ಇದರಿಂದಾಗಿ ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಜಲಾವೃತವಾಗಿವೆ. ಮೆಕ್ಕೆಜೋಳದ ಹೊಲಗಳಲ್ಲಿ ನೀರು ನಿಂತಿದೆ. ಕೆಲವೆಡೆ ಒಡ್ಡು ಒಡೆದಿವೆ ಎಂದು ಕೊಮಾರನಹಳ್ಳಿ, ಹಾಲಿವಾಣ, ಕೊಪ್ಪದ ರೈತರು ಆತಂಕ ವ್ಯಕ್ತಪಡಿಸಿದರು.

ADVERTISEMENT

ಮಳೆಯಿಂದ ಹೆಂಚು ಹಾಗೂ ತಾರಸಿ ಮನೆಗಳಲ್ಲಿ ನೀರು ಸುರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.