ADVERTISEMENT

ಕಳಪೆ ಗೊಬ್ಬರ ತಯಾರಿಕಾ ಘಟಕ ಜಪ್ತಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 17:47 IST
Last Updated 18 ಜೂನ್ 2019, 17:47 IST
ದಾವಣಗೆರೆಯ ವಿದ್ಯಾನಗರದ ಬಳಿ ಸಾವಯವ ಆರ್ಗ್ಯಾನಿಕ್‌ ಗೋದಾಮಿನ ಮೇಲೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳು ಜಪ್ತಿ ಮಾಡಿದರು
ದಾವಣಗೆರೆಯ ವಿದ್ಯಾನಗರದ ಬಳಿ ಸಾವಯವ ಆರ್ಗ್ಯಾನಿಕ್‌ ಗೋದಾಮಿನ ಮೇಲೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳು ಜಪ್ತಿ ಮಾಡಿದರು   

ದಾವಣಗೆರೆ: ವಿದ್ಯಾನಗರದಲ್ಲಿ ಆರ್‌ಪಿಎನ್‌ ಕ್ರಾಪ್ ಸೈನ್ಸ್ ಹೆಸರಿನಲ್ಲಿ ಸಾವಯವ ಕಳಪೆ ಆರ್ಗ್ಯಾನಿಕ್‌ ಗೊಬ್ಬರ ತಯಾರಿಸಿ ರೈತರಿಗೆ ವಂಚಿಸುತ್ತಿದ್ದ ಉಗ್ರಾಣದ ಮೇಲೆ ಕೃಷಿ ಅಧಿಕಾರಿಗಳು ಹಾಗೂ ಪೊಲೀಸರು ಮಂಗಳವಾರ ದಾಳಿ ನಡೆಸಿ ಮುಚ್ಚಿಸಿದ್ದಾರೆ.

ಪೊಲೀಸರ ಭದ್ರತೆಯೊಂದಿಗೆ ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ರೇವಣಸಿದ್ದನಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು, ಗೊಬ್ಬರ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳು ಹಾಗೂ ಯಂತ್ರಗಳನ್ನು ವಶಪಡಿಸಿಕೊಂಡು ಉಗ್ರಾಣವನ್ನು ಜಪ್ತಿ ಮಾಡಿ, ಅಂಗಡಿ ಮಾಲೀಕ ರಾಮಚಂದ್ರಪ್ಪ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

‘ಬೆಂಗಳೂರಿನ ಹೆಸರು ಇರುವ ಲೇಬಲ್‌ಗಳನ್ನು ತಯಾರಿಸಿ ದಾವಣಗೆರೆಯಲ್ಲಿ ಮುದ್ರಿಸಲಾಗುತ್ತಿದ್ದು, ಮಾಹಿತಿಯ ಮೇರೆಗೆ ಡಿವೈಎಸ್‌ಪಿ ನಾಗರಾಜು, ಸರ್ಕಲ್ ಇನ್‌ಸ್ಪೆಕ್ಟರ್ ಆನಂದ್ ಹಾಗೂ ಎಸ್‌ಐ ಭದ್ರತೆಯಲ್ಲಿ ದಾಳಿ ನಡೆಸಿ, ಉಗ್ರಾಣವನ್ನು ಜಪ್ತಿ ಮಾಡಿದ್ದೇವೆ’ ಎಂದು ಪ್ರಭಾರ ಇಒ ರೇವಣಸಿದ್ದನಗೌಡ ತಿಳಿಸಿದರು.

ADVERTISEMENT

ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಕೃಷಿ ಅಧಿಕಾರಿಗಳಾದ ವೆಂಕಟೇಶಮೂರ್ತಿ, ಲಾವಣ್ಯ ದಾಳಿಯ ವೇಳೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.