ADVERTISEMENT

ಬಿಜೆಪಿಯಿಂದ ಕ್ವಿಟ್ ಇಂಡಿಯಾ 78ನೇ ವರ್ಷಾಚರಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:23 IST
Last Updated 9 ಆಗಸ್ಟ್ 2020, 16:23 IST
ಕ್ವಿಟ್ ಇಂಡಿಯಾ ಚಳುವಳಿಯ 78ನೇ ವರ್ಷಾಚರಣೆ ಅಂಗವಾಗಿ ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಧೂಡಾ ಅದ್ಯಕ್ಷ ರಾಜನಹಳ್ಲಿ ಶಿವಕುಮಾರ್ ದಾವಣಗೆರೆಯ ಪಾಲಿಕೆ ಕಚೇರಿ ಆವರಣದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಕ್ವಿಟ್ ಇಂಡಿಯಾ ಚಳುವಳಿಯ 78ನೇ ವರ್ಷಾಚರಣೆ ಅಂಗವಾಗಿ ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಧೂಡಾ ಅದ್ಯಕ್ಷ ರಾಜನಹಳ್ಲಿ ಶಿವಕುಮಾರ್ ದಾವಣಗೆರೆಯ ಪಾಲಿಕೆ ಕಚೇರಿ ಆವರಣದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಇಲ್ಲಿನ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕ್ವಿಟ್ ಇಂಡಿಯಾ ಚಳವಳಿಯ 78ನೇ ವರ್ಷಾಚರಣೆಯನ್ನು ಭಾನುವಾರ ಮಹಾನಗರ ಪಾಲಿಕೆ ಆವರಣದಲ್ಲಿ ಆಚರಿಸಲಾಯಿತು.

ಪಾಲಿಕೆ ಆವರಣದಲ್ಲಿರುವ ಮಹಾತ್ಮಗಾಂಧಿ, ಬಾಬು ಜಗಜೀವನರಾಂ, ಬಿ.ಆರ್. ಅಂಬೇಡ್ಕರ್ ಹಾಗೂ ಭಗತ್‌ಸಿಂಗ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಕಾರ್ಯಕರ್ತರು ವಂದೇ ಮಾತರಂ ಹಾಡಿ, ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದರು.

ಕ್ವಿಟ್ ಇಂಡಿಯಾ ಚಳವಳಿ ವೇಳೆ ದಾವಣಗೆರೆಯಲ್ಲಿ ನಡೆದ ಗೋಲಿಬಾರ್‌ನಲ್ಲಿ ಹುತಾತ್ಮರಾದ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹದಡಿ ನಿಂಗಪ್ಪ, ಹಮಾಲಿ ತಿಮ್ಮಣ್ಣ ಹಾಗೂ ಮಾಗಾನಹಳ್ಳಿ ಹನುಮಂತಪ್ಪ ಅವರನ್ನು ಸ್ಮರಿಸಲಾಯಿತು.

ADVERTISEMENT

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತ ಜಾಧವ್, ಧೂಡಾ ಅಧ್ಯಕ್ಷ ರಾಜನಳ್ಳಿ ಶಿವಕುಮಾರ್,ಸದಸ್ಯರಾದ ದೇವಿರಮ್ಮ, ಡಿ.ಎಲ್. ರಾಮಚಂದ್ರಪ್ಪ, ಶಾಂತಮ್ಮ,ಮಂಡಲದ ಅಧ್ಯಕ್ಷ ಆನಂದ್ ರಾವ್ ಸಿಂಧೆ, ಜಿಲ್ಲಾ ಕಾರ್ಯದರ್ಶಿ ಗೋಪಾಲ್‌ರಾವ್ ಮಾನೆ, ಪ್ರಧಾನ ಕಾರ್ಯದರ್ಶಿ ನೀಲಗುಂದ ರಾಜು, ಟಿಂಕರ್ ಮಂಜಣ್ಣ, ಶ್ರೀಕಾಂತ್ ನಿಲಗುಂದ, ಶಿವಾನಂದ ಪಾಟೀಲ್, ನವೀನ್ ಕುಮಾರ್ ಎಚ್ ಬಿ, ಮಂಜುನಾಥ ಪೈ, ಪುಲೈ, ಶೋಭಾ ಕೊಟ್ರೇಶ್, ಸುಮಾ, ಮಲ್ಲಿಕಾರ್ಜುನ ಬಸಾಪುರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.