ADVERTISEMENT

ಹರಿಹರ | ಮಳೆ: 7 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 13:50 IST
Last Updated 20 ಜುಲೈ 2024, 13:50 IST
ಹರಿಹರದ ಕೈಲಾಸ ನಗರದಲ್ಲಿ ಮಳೆಗೆ ಮನೆ ಹಾನಿಗೀಡಾಗಿರುವುದು
ಹರಿಹರದ ಕೈಲಾಸ ನಗರದಲ್ಲಿ ಮಳೆಗೆ ಮನೆ ಹಾನಿಗೀಡಾಗಿರುವುದು   

ಹರಿಹರ: ಮಳೆ ಹಾಗೂ ಗಾಳಿಗೆ ತಾಲ್ಲೂಕಿನಲ್ಲಿ ಒಂದು ದನದ ಕೊಟ್ಟಿಗೆ ಸೇರಿದಂತೆ ಒಟ್ಟು ಏಳು ಮನೆಗಳಿಗೆ ಹಾನಿಯಾಗಿದ್ದು ಒಟ್ಟು ₹ 6.25 ಲಕ್ಷ ನಷ್ಟವಾಗಿದೆ.

ಮಲೇಬೆನ್ನೂರು ಮತ್ತು ಕೊಕ್ಕನೂರಿನಲ್ಲಿ ಮನೆಗಳಿಗೆ ತೀವ್ರ ಹಾನಿಯಾಗಿದ್ದರೆ, ಹರಿಹರದ ಕೈಲಾಸನಗರ, ಹೊಳೆಸಿರಿಗೆರೆಯಲ್ಲಿ ತಲಾ ಒಂದು ಮನೆ ಹಾಗೂ ರಾಜನಹಳ್ಳಿಯಲ್ಲಿ 2 ಮನೆಗಳಿಗೆ ಹಾಗೂ ವಾಸನದಲ್ಲಿ ದನದ ಕೊಟ್ಟಿಗೆಗೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಮಳೆ ವಿವರ: ಹರಿಹರದಲ್ಲಿ 21.8 ಮಿ.ಮೀ., ಕೊಂಡಜ್ಜಿ–14 ಮಿ.ಮೀ., ಹೊಳೆಸಿರಿಗೆರೆ–40.2 ಮಿ.ಮೀ., ಮಲೇಬೆನ್ನೂರು– 16.6 ಮಿ.ಮೀ. ಮಳೆಯಾಗಿದೆ.

ADVERTISEMENT
ಹರಿಹರ: ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಮಳೆಗೆ ಮನೆ ಹಾನಿಯಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.