ಕಡರನಾಯ್ಕನಹಳ್ಳಿ: ಭತ್ತದ ಕೊಯ್ಲು ಪ್ರಾರಂಭವಾಗಿದ್ದರೂ ವರಣನ ಆರ್ಭಟ ನಿಂತಿಲ್ಲ. ಜಮೀನುಗಳಲ್ಲೇ ಭತ್ತ ಕೊಳೆಯುತ್ತಿದ್ದು, ಜಾನುವಾರುಗಳ ಮೇವಿಗೂ ಕುತ್ತು ಬಂದಿದೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ.
ಮಳೆಯ ಬಿಡುವಿನಲ್ಲೇ ಯಂತ್ರದ ಮೂಲಕ ಕೆಲವು ರೈತರು ಕಟಾವು ಮಾಡಿದ್ದಾರೆ. ಆದರೆ ಒಣಗಿಸಲು ಬಿಸಿಲು ಇಲ್ಲದೆ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಇಲ್ಲದಂತಾಗಿ, ರೈತರಿಗೆ ನಷ್ಟದ ಮೇಲೆ ನಷ್ಟ ಅನುಭವಿಸುವಂತಾಗಿದೆ ಎಂದು ರೈತರಾದ ಚಂದ್ರಪ್ಪ ಗೋಣೆಪ್ಪರ ಮತ್ತು ಮಂಜುನಾಥ್ ಗೋಣೆಪ್ಪರ ಅಳಲನ್ನು ತೋಡಿಕೊಂಡರು.
ಎಕರೆಗೆ ₹15,000ದಿಂದ ₹20,000 ಖರ್ಚು ಬರುತ್ತದೆ. ಕ್ವಿಂಟಲ್ ಭತ್ತದ ದರ ₹1,950 ನಿಂದ ₹2,000 ಇದೆ. ಮೇವೂ ಸಿಗದ ಸ್ಥಿತಿ ಇದ್ದು, ಇದನ್ನೂ ಪರಿಗಣಿಸಿ, ಪರಿಹಾರ ನೀಡಬೇಕು ಎಂದು ವಾಸನದ ರೈತ ಗದಿಗೆಪ್ಪ ಗಂಟೇರ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.