ADVERTISEMENT

ಸಕಾಲದಲ್ಲಿ ಸಾಲ ಮರುಪಾವತಿಸಿ: ಸಿ.ಡಿ.ಒ ನವೀನ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 16:00 IST
Last Updated 2 ಜುಲೈ 2025, 16:00 IST
ಸಾಸ್ವೆಹಳ್ಳಿ ಸಮೀಪದ ಬೀರಗೊಂಡನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು
ಸಾಸ್ವೆಹಳ್ಳಿ ಸಮೀಪದ ಬೀರಗೊಂಡನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು   

ಸಾಸ್ವೆಹಳ್ಳಿ: ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಸ್ಥಾಪನೆಗೊಂಡ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿವೆ ಎಂದು ಹೊನ್ನಾಳಿಯ ಸಿ.ಡಿ.ಒ ನವೀನ್ ಹೇಳಿದರು.  

ಸಮೀಪದ ಬೀರಗೊಂಡನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. 

ಜಮೀನು ಸಾಲ ಪಡೆದವರು ಮತ್ತು ಅಂಗಡಿ ವ್ಯವಹಾರಕ್ಕೆ ಸಾಲ ಪಡೆದವರು ಕೃಷಿ ಪತ್ತಿನ ಸಂಘಕ್ಕೆ ಸಕಾಲದಲ್ಲಿ ಮರುಪಾವತಿ ಮಾಡುವುದನ್ನು ಮರೆಯಬಾರದು ಎಂದರು. 

ADVERTISEMENT

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನರಸಿಂಹಪ್ಪ ಎಚ್.ಕೆ. ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರಾಧಿಕಾರಿ ಸುರೇಶ್, ನಿರ್ದೇಶಕರಾದ ಕೆ.ಜಿ. ಬಸವನಗೌಡ್ರು, ಟಿ. ಮಂಜುನಾಥ, ಎಚ್.ಬಿ. ಕೇಶವಾಚಾರ್, ಬಿ.ಎಸ್. ವಿಶ್ವನಾಥ್, ಶಿವನಗೌಡ್ರು ಜಿ.ಪಿ., ಭೀಮ ನಾಯಕ್, ವೀರಕೇಶವ ಮತ್ತು ಕಾರ್ಯದರ್ಶಿ ಶಿಲ್ಪಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.