ADVERTISEMENT

ದಾವಣಗೆರೆ: ರಸ್ತೆ ಅಪಘಾತದಲ್ಲಿ ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 15:41 IST
Last Updated 9 ಜೂನ್ 2025, 15:41 IST
<div class="paragraphs"><p>ಚಿರತೆ</p></div>

ಚಿರತೆ

   

ಮಾಯಕೊಂಡ: ಸಮೀಪದ ಲಕ್ಕಮುತ್ತೇನಹಳ್ಳಿ ರಾಷ್ಟ್ರೀಯ ಹೆದ್ದಾರಿ 47ರ ಬಳಿ ಭಾನುವಾರ ರಾತ್ರಿ ಚಿರತೆ ಮೃತಪಟ್ಟಿದೆ.

ರಾತ್ರಿ 11.30ರ ಸಮಯದಲ್ಲಿ ಹತ್ತು ವರ್ಷದ ಗಂಡು ಚಿರತೆಯು ಅರಣ್ಯದಿಂದ ರಸ್ತೆಗೆ ಬಂದಿದೆ. ಆಗ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ಸಾವಿಗೀಡಾಗಿದೆ.

ADVERTISEMENT

‘ಆನಗೋಡು ಹಾಗೂ ದಾವಣಗೆರೆ ವಿಭಾಗದ ಅರಣ್ಯ ಸಿಬ್ಬಂದಿ ಸೋಮವಾರ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಆನಗೋಡು ಬಳಿ ಅದನ್ನು ಸುಡಲಾಯಿತು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವರದರಂಗನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.