ADVERTISEMENT

ಭ್ರಷ್ಟಾಚಾರ, ದುರಾಸೆಯಿಂದ ಸಮಾಜದಲ್ಲಿ ಅಶಾಂತಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 5:12 IST
Last Updated 28 ಡಿಸೆಂಬರ್ 2023, 5:12 IST
ಜಗಳೂರಿನಲ್ಲಿ ನಡೆದ ಪ್ರದಾನ ಸಮಾರಂಭಕ್ಕೆ ಪತ್ರಕರ್ತ ಜಗದೀಶ್ ಕೊಪ್ಪ ಚಾಲನೆ ನೀಡಿದರು. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ, ಶಾಸಕ ಬಿ. ದೇವೇಂದ್ರಪ್ಪ, ಹುಸೇನ್ ಮಿಯ್ಯಾ ಇದ್ದರು
ಜಗಳೂರಿನಲ್ಲಿ ನಡೆದ ಪ್ರದಾನ ಸಮಾರಂಭಕ್ಕೆ ಪತ್ರಕರ್ತ ಜಗದೀಶ್ ಕೊಪ್ಪ ಚಾಲನೆ ನೀಡಿದರು. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ, ಶಾಸಕ ಬಿ. ದೇವೇಂದ್ರಪ್ಪ, ಹುಸೇನ್ ಮಿಯ್ಯಾ ಇದ್ದರು   

ಜಗಳೂರು: ‘ಪ್ರಸ್ತುತ ಸಮಾಜದಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿದ್ದು, ದುರಾಸೆಯಿಂದ ಭವಿಷ್ಯದಲ್ಲಿ ದುರಂತ ಸಂಭವಿಸಬಹುದು. ನಾನು ಲೋಕಾಯುಕ್ತ ಆಗಿದ್ದ ಅವಧಿಯಲ್ಲಿ ಅನ್ಯಾಯಗಳನ್ನು ಕಂಡು ಕಣ್ಣೀರಿಟ್ಟಿದ್ದೇನೆ’ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಹೇಳಿದರು.

ಪಟ್ಟಣದ ಜೆ.ಎಂ.ಇಮಾಂ ಟ್ರಸ್ಟ್ ವತಿಯಿಂದ ಜೆ.ಎಂ.ಇಮಾಂ ಸ್ಮಾರಕ ಶಾಲೆ ಆವರಣದಲ್ಲಿ ‘ಮುಷೀರ್–ಉಲ್–ಮುಲ್ಕ್’ ಇಮಾಂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಲಂಚಕೊಡುವುದು ಮತ್ತು ಪಡೆಯುವುದು ಎರಡೂ ತಪ್ಪು. ದುರಾಸೆ ಹೆಚ್ಚಾದರೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿತವಾಗಿ ಅಶಾಂತಿಗೆ ಕಾರಣವಾಗಬಹುದು. ಅನ್ಯಾಯ, ಅಕ್ರಮ ಮತ್ತು ಭ್ರಷ್ಟಾಚಾರ ವ್ಯಕ್ತಿಯ ತಪ್ಪಲ್ಲ. ಸಮಾಜದ ತಪ್ಪಾಗಿದೆ. ಇಂದಿನ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆಯಿಲ್ಲ. ಶ್ರೀಮಂತಿಕೆ, ಸಂಪತ್ತುಗಳಿಸುವ ಸ್ವಾರ್ಥಭಾವನೆಯಿಂದಾಗಿ ಕಾನೂನು ವಿರುದ್ದವಾಗಿ ಎಲ್ಲೆಡೆ ಪೈಪೋಟಿ ಕಂಡುಬರುತ್ತಿದೆ ಎಂದು ಬೇಸರದಿಂದ ನುಡಿದರು.

ADVERTISEMENT

ಪತ್ರಕರ್ತ ಜಗದೀಶ್ ಕೊಪ್ಪ, ಶಾಸಕ‌ ಬಿ.ದೇವೇಂದ್ರಪ್ಪ ಮಾತನಾಡಿದರು. ಶೌರ್ಯ ಪ್ರಶಸ್ತಿ ಪುರಸ್ಕೃತರಾದ ಮಾನಸಿ ಪಾಲ್ಗುಣಿ, ಯಜ್ಞ ಅವರನ್ನು ಸನ್ಮಾನಿಸಲಾಯಿತು.

ಜೆಎಂ ಇಮಾಂ ಟ್ರಸ್ಟ್ ಕಾರ್ಯದರ್ಶಿ ಹುಸೇನ್ ಮಿಯ್ಯಾ, ಪಿಂಜಾರ್ ನಧಾಫ್ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಜಲೀಲ್ ಸಾಹೇಬ್, ಸಾಹಿತಿ ಬಸವೇಶ್, ಎನ್.ಟಿ.ಎರ್ರಿಸ್ವಾಮಿ, ಡಿ.ಸಿ.ಮಲ್ಲಿಕಾರ್ಜುನ್, ಡಾ.ದಾದಪೀರ್ ನವಿಲೆ ಹಾಳ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.